ADVERTISEMENT

ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟ ಶ್ರೀಲೀಲಾ: ಆಶಿಕಿ–3ಗೆ ಹೀರೋಯಿನ್!

ಯಂಗ್ ಸ್ಟಾರ್ ಕಾರ್ತಿಕ್ ಆರ್ಯನ್ ಹೀರೊ ಆಗಿರುವ, ಅನುರಾಗ್ ಬಸು ನಿರ್ದೇಶಿಸುತ್ತಿರುವ ‘ಆಶಿಕಿ–3’ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2025, 14:33 IST
Last Updated 15 ಫೆಬ್ರುವರಿ 2025, 14:33 IST
<div class="paragraphs"><p>ಶ್ರೀಲೀಲಾ,&nbsp;ಕಾರ್ತಿಕ್ ಆರ್ಯನ್</p></div>

ಶ್ರೀಲೀಲಾ, ಕಾರ್ತಿಕ್ ಆರ್ಯನ್

   

ಬೆಂಗಳೂರು: ಪುಷ್ಪ–2 ಸಿನಿಮಾದಲ್ಲಿನ ಯಶಸ್ಸಿನ ನಂತರ ಕನ್ನಡ ಮೂಲದ ನಟಿ ಶ್ರೀಲೀಲಾ ಅವರು ಭರ್ಜರಿಯಾಗಿ ಬಾಲಿವುಡ್‌ಗೆ ಪ್ರವೇಶ ಮಾಡಿದ್ದಾರೆ.

ಯಂಗ್ ಸ್ಟಾರ್ ಕಾರ್ತಿಕ್ ಆರ್ಯನ್ ಹೀರೊ ಆಗಿರುವ, ಅನುರಾಗ್ ಬಸು ನಿರ್ದೇಶಿಸುತ್ತಿರುವ ‘ಆಶಿಕಿ–3’ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಕಾರ್ತಿಕ್ ಆರ್ಯನ್ ಅವರು ‘ಆಶಿಕಿ–3’ ಸಿನಿಮಾದ ಬಗೆಗಿನ ಕಿರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ದೀಪಾವಳಿಗೆ ತೆರೆಗೆ ಬರಲಿದೆ ಎನ್ನಲಾಗಿದೆ. ಟೀಸರ್‌ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗಿನ ಶ್ರೀಲೀಲಾ ರೊಮ್ಯಾನ್ಸ್‌ ವಿಡಿಯೊ ಸದ್ದು ಮಾಡಿದೆ.

ಬಹುನಿರೀಕ್ಷಿತ ಈ ಚಿತ್ರವನ್ನು ಟಿ–ಸೀರಿಸ್‌ನ ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ.

2013 ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಆಗಿದ್ದ ಮ್ಯೂಸಿಕಲ್ ರೊಮ್ಯಾನ್ಸ್ ಡ್ರಾಮಾ ‘ಆಶಿಕಿ–2’ ನ ಸಿಕ್ವೆಲ್ ಈ ಹೊಸ ಚಿತ್ರವಾಗಿದೆ.

ಕಳೆದ ಎರಡು ವರ್ಷದಿಂದ ‘ಆಶಿಕಿ–3’ಗೆ ತಯಾರಿ ನಡೆಯುತ್ತಿತ್ತು. ಚಿತ್ರಕ್ಕೆ ತೃಪ್ತಿ ದಿಮ್ರಿ ಅವರನ್ನೂ ಆಯ್ಕೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ತೃಪ್ತಿ ಹೆಚ್ಚು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಮುನಿಸಿಕೊಂಡಿರುವ ನಿರ್ದೇಶಕ ಅನುರಾಗ್ ಬಸು, ತೃಪ್ತಿ ಬದಲಿಗೆ ಶ್ರೀಲೀಲಾಗೆ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

‘ಆಶಿಕಿ–3’ಗೆ ಪ್ರೀತಂ ಅವರ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.