ನಟ ಸುದೀಪ್ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್’ ಅಂತಿಮ ಹಂತದ ಶೂಟಿಂಗ್ಗೆ ಕಾಲಿಟ್ಟಿದೆ. ಚೆನ್ನೈನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಆರಂಭವಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ಶೂಟಿಂಗ್ ಪೂರ್ಣಗೊಳ್ಳಲಿದೆ.
ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದ ಚಿತ್ರೀಕರಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಹಾಕಿರುವ ಸೆಟ್ನಲ್ಲಿ ನಡೆಯುತ್ತಿದೆ. ಡಿಸೆಂಬರ್ನಲ್ಲಿ ಚಿತ್ರದ ಚಿತ್ರೀಕರಣ ಏಕಾಏಕಿ ಸ್ಥಗಿತಗೊಂಡಿತ್ತು. ಚೆನ್ನೈನಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ ಚಿತ್ರದ ಸೆಟ್ಗಳಿಗೆ ಹಾನಿಯಾಗಿತ್ತು. ಈ ಕಾರಣದಿಂದ ಜನವರಿಗೆ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಈ ನಡುವೆ ಕನ್ನಡ ಚಲನಚಿತ್ರ ಕಪ್(ಕೆಸಿಸಿ) ಕ್ರಿಕೆಟ್ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ಸುದೀಪ್, ಇದೀಗ ಸೆಟ್ಗೆ ಮರಳಿದ್ದಾರೆ. ಶೂಟಿಂಗ್ ಪುನರಾರಂಭವಾಗಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ನಟಿಸುತ್ತಿರುವ ಮಾತು ಕೇಳಿಬರುತ್ತಿದ್ದು, ಚಿತ್ರತಂಡದಿಂದ ಅಧಿಕೃತವಾದ ಮಾಹಿತಿ ಇಲ್ಲ.
ನಟಿ ಸಂಯುಕ್ತ ಹೊರನಾಡು ‘ಮ್ಯಾಕ್ಸ್’ನಲ್ಲಿ ನಟಿಸುತ್ತಿದ್ದು, ವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಶಿವಕುಮಾರ್ ಕಲಾನಿರ್ದೇಶನ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 2023ರಲ್ಲೇ ಈ ಸಿನಿಮಾವನ್ನು ತೆರೆಗೆ ತರುವ ಹಠ ಸುದೀಪ್ ಅವರಿಗಿತ್ತು. ಇದೀಗ ಸಿನಿಮಾ ಇದೇ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.