
ಮಹೇಂದ್ರ ನಾಯಕನಾಗಿ ನಟಿಸಿರುವ ಎನ್.ಕೆ.ರಾಜೇಶ್ ನಾಯ್ಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಸುಖೀಭವ’ ಸಿನಿಮಾದ ಹಾಡೊಂದಕ್ಕೆ ನಟ ಶರಣ್ ದನಿಯಾಗಿದ್ದಾರೆ.
ಸಿನಿಮಾವನ್ನು ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಹಾಗೂ ಭಾರ್ಗವಿ ಸಂತೋಷ್ ನಿರ್ಮಿಸಿದ್ದಾರೆ. ಶರಣ್ ಈ ಸಿನಿಮಾದಲ್ಲೂ ಮದ್ಯದ ಕುರಿತಾದ ‘ಬೇಡ ಮಚ್ಚಾ ಬೇಡ’ ಎಂಬ ಹಾಡನ್ನು ಹಾಡಿದ್ದಾರೆ. ಸಿನಿಮಾವು ಕೌಟುಂಬಿಕ ಕಥೆಯನ್ನು ಹೊಂದಿದ್ದು, ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾಯಕ ಮಹೇಂದ್ರಗೆ ಜೋಡಿಯಾಗಿ ಸುಶ್ಮಿತ ನಾಯಕ್ ಹಾಗೂ ವಿಯಾನ್ಶಿ ಹೆಗ್ಡೆ ನಟಿಸಿದ್ದಾರೆ. ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಿ.ಜೆ. ಭರತ್-ಶುಭಂ ಸಂಗೀತ, ಮಂಜುನಾಥ್ ನಾಯಕ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.