ADVERTISEMENT

ಅತ್ತಿಗೆ ಎಂದು ಕತ್ರೀನಾರನ್ನು ಸ್ವಾಗತಿಸಿದ ವಿಕ್ಕಿ ಸಹೋದರ ಸನ್ನಿ ಕೌಶಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2021, 6:51 IST
Last Updated 10 ಡಿಸೆಂಬರ್ 2021, 6:51 IST
ವಿಕ್ಕಿ ಕೌಶಲ್‌ ಮತ್ತು ಕತ್ರೀನಾ ಕೈಫ್‌
ವಿಕ್ಕಿ ಕೌಶಲ್‌ ಮತ್ತು ಕತ್ರೀನಾ ಕೈಫ್‌   

ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ರಾಜಸ್ಥಾನದಲ್ಲಿ ಗುರುವಾರ ಮದುವೆಯಾಗಿದ್ದಾರೆ.

ವಿಕ್ಕಿ ಸಹೋದರ ಸನ್ನಿ ಕೌಶಲ್‌ ಅವರು ಕತ್ರೀನಾರನ್ನುಅತ್ತಿಗೆ ಎಂದು ಸಂಬೋಧಿಸುವ ಮೂಲಕ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ.ಇದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಕತ್ರೀನಾ ಹಾಗೂ ವಿಕ್ಕಿ ವಿವಾಹದ ಫೋಟೊ ಹಂಚಿಕೊಂಡಿರುವ ಸನ್ನಿ ಕೌಶಲ್‌, ‘ಇಂದು ನನ್ನ ಹೃದಯದಲ್ಲಿ ಮತ್ತೊಬ್ಬರು ಸ್ಥಾನ ಪಡೆದುಕೊಂಡರು. ಅತ್ತಿಗೆಯವರೇ ನಮ್ಮಕುಟುಂಬಕ್ಕೆ ಸುಸ್ವಾಗತ. ಈ ಸುಂದರ ಜೋಡಿಯಜೀವನವು ಸಂತಸಮಯವಾಗಿರಲಿ‘ ಎಂದು ಹಾರೈಸಿದ್ದಾರೆ. ‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.