ADVERTISEMENT

ಸೂರ್ಯ ರಶ್ಮಿಗೆ ಮೈ ಒಡ್ಡಿದ ರಕುಲ್‌ ಪ್ರೀತ್‌ ಫೋಟೊ ವೈರಲ್‌: ಅದರಲ್ಲಿ ಏನಿದೆ?

ಏಜೆನ್ಸೀಸ್
Published 20 ಜೂನ್ 2020, 7:55 IST
Last Updated 20 ಜೂನ್ 2020, 7:55 IST
ರಕುಲ್‌ ಪ್ರೀತ್‌ ಸಿಂಗ್‌
ರಕುಲ್‌ ಪ್ರೀತ್‌ ಸಿಂಗ್‌   

ಹೈದರಾಬಾದ್‌: ಲಾಕ್‌ಡೌನ್ ಪರಿಣಾಮ ಸದ್ಯ, ಎಲ್ಲಾ ಸೆಲೆಬ್ರಿಟಿಗಳು ಮನೆಗಳಲ್ಲಿ ಉಳಿದಿದ್ದಾರೆ. ಸಿನಿಮಾಗಳ ಚಿತ್ರೀಕರಣ ನಿಂತಿರುವುದರಿಂದ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ.

ತಮ್ಮ ವರ್ಕೌಟ್ ವಿಡಿಯೊಗಳ ಜೊತೆಗೆ ತಮ್ಮ ಫೋಟೊ ಶೂಟ್ ಮಾಡಿಸಿದ ಹಾಟ್ ಫೋಟೊಗಳನ್ನು ನಟಿಯರು ಅಪ್‌ಲೋಡ್‌ ಮಾಡುತ್ತಿದ್ದಾರೆ. ಇಂತಹ ಪೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಟಾಲಿವುಡ್ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಇದೇ ಹಾದಿಯಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ತೊಡೆಗಳು ಕಾಣುವಂಹ ಮಾದಕ ಕಪ್ಪು ಬಿಳುಪು ಫೋಟೊ ವನ್ನು ಶೇರ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 'ಸೂರ್ಯನಬೆಳಕು ನನ್ನ ನೆಚ್ಚಿನ ಆಭರಣ' ಎಂದು ಹೇಳಿದ್ದಾರೆ.

ADVERTISEMENT

'ಮನ್ಮಥ 2' ಚಿತ್ರದಲ್ಲಿ ನಟಿಸಿದ್ದ ಈ ಚೆಲುವೆಗೆ ಸದ್ಯಕ್ಕೆ ಟಾಲಿವುಡ್ ನಿಂದ ಆಫರ್ ಬಂದಿಲ್ಲ. ಇನ್ನು ತಮಿಳಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲಾಕ್‌ಡೌನ್‌ ಪರಿಣಾಮ ಚಿತ್ರೀಕರಣ ನಿಂತಿರುವುದರಿಂದ ರಕುಲ್‌ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.