ADVERTISEMENT

ವಿಚಾರಣೆಗೆ ಹಾಜರಾಗಲು ಸೂಚಿಸಿ ರಿಯಾ ಚಕ್ರವರ್ತಿಗೆ ಸಮನ್ಸ್‌

ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೂ ಡ್ರಗ್‌ ಜಾಲಕ್ಕೂ ನಂಟು ಆರೋಪ

ಪಿಟಿಐ
Published 6 ಸೆಪ್ಟೆಂಬರ್ 2020, 5:56 IST
Last Updated 6 ಸೆಪ್ಟೆಂಬರ್ 2020, 5:56 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ಮುಂಬೈ:ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಡ್ರಗ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಗೆ ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಭಾನುವಾರ ಸಮನ್ಸ್‌ ಜಾರಿ ಮಾಡಿದ್ದಾರೆ.

ಪಶ್ಚಿಮ ಮುಂಬೈನಲ್ಲಿರುವ ನಟಿ ಮನೆಗೆ ತೆರಳಿ ಸಮನ್ಸ್‌ ನೀಡಿರುವ ಎನ್‌ಸಿಬಿ ಜಂಟಿ ನಿರ್ದೇಶಕ ಸಮೀರ್‌ ವಾಂಖೆಡೆ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ರಿಯಾ ಚಕ್ರವರ್ತಿ ನಟ ಸುಶಾಂತ್‌ ಸಿಂಗ್‌ ಸಾವು ಪ್ರಕರಣದ ಮುಖ್ಯ ಆರೋಪಿ.

ಡ್ರಗ್‌ ಜಾಲ ಕುರಿತ ತನಿಖೆ ಚುರುಕುಗೊಳಿಸಿರುವ ಎನ್‌ಸಿಬಿ, ಈ ಪ್ರಕರಣದ ಇತರ ಆರೋಪಿಗಳಾದ ಶೋವಿಕ್‌, ಮಿರಾಂಡ ಹಾಗೂ ಸಾವಂತ್‌ ಅವರೊಂದಿಗೆ ರಿಯಾ ಅವರನ್ನು ಮುಖಾಮುಖಿಯಾಗಿಸಿ, ಈ ಜಾಲದಲ್ಲಿ ಅವರ ಪಾತ್ರ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲಿದೆ.

ADVERTISEMENT

ನಿಷೇಧಿತ ಮಾದಕ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಇವರ ಮೊಬೈಲ್‌ ಸಂಭಾಷಣೆ, ಚಾಟ್‌ ವಿವರಗಳಿಂದ ತಿಳಿದು ಬರುತ್ತದೆ. ಈ ಆಯಾಮದ‌ಲ್ಲೂ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.