ADVERTISEMENT

ಬಾಹುಬಲಿ ನಟಿ ತಮನ್ನಾಳಿಗೆ ಲಕ್ಕಿ ಪಿಲ್ಲೊ!

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST
ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ   

ಕ್ವಾರೆಂಟೈನ್ ದಿನಗಳನ್ನು ತುಂಬಾ ಖುಷಿಯಿಂದ ಕಳೆಯುತ್ತಿರುವ ಸೆಲೆಬ್ರೆಟಿಗಳು ದಿನಕ್ಕೊಂದು ಚಾಲೆಂಜ್ ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಟಿಯರ ಪಿಲ್ಲೊ ಚಾಲೆಂಜ್ ಕೂಡ ವೈರಲ್ ಆಗುತ್ತಿದೆ.

ಈಗ ಪಿಲ್ಲೊ ಚಾಲೆಂಜ್‌ ಸ್ವೀಕರಿಸಿರುವುದು ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ. ಬಿಳಿಬಣ್ಣದ ದಿಂಬು ಹಾಗೂ ಅದರ ಮೇಲೆ ಕಪ್ಪುಬಣ್ಣದ ಗೌಸಿ ಬೆಲ್ಟ್‌ ಧರಿಸಿ ತೆಗೆಸಿಕೊಂಡಿರುವ ಫೋಟೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಿಲ್ಲೊ ಚಾಲೆಂಜ್‌ ಎಂದರೆ ತಲೆದಿಂಬನ್ನು ಬೆಲ್ಟ್ ಮೂಲಕ ಮೈಗೆ ಕಟ್ಟಿಕೊಂಡು ಡ್ರೆಸ್‌ನಂತೆ ಮಾಡಿಕೊಳ್ಳುವುದು. ಇದೀಗ ವೈರಲ್ ಆಗಿರುವ ಈ ಟ್ರೆಂಡ್ ಅನ್ನು ಹಲವು ನಟಿಯರು ಸ್ವೀಕರಿಸಿ ತಮ್ಮ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ತಲೆದಿಂಬು, ಬೆಲ್ಟ್‌ ಹಾಗೂ ಕೆಂಪುಬಣ್ಣದ ಹೀಲ್ಡ್ ಚಪ್ಪಲಿ ಧರಿಸಿ ಮನೆಯ ಹಾಲ್‌ವೊಂದರಲ್ಲಿ ಮಲಗಿರುವ ತಮನ್ನಾ ಚಿತ್ರಕ್ಕೆ ಮಾದಕ ಪೋಸ್‌ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ತರೇಹವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸೋ ಹಾಟ್‌, ಲಕ್ಕಿ ಪಿಲ್ಲೊ’ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.