ADVERTISEMENT

ಪತ್ರಕರ್ತರ ಮೇಲೆ ತಮನ್ನಾ ಬೌನ್ಸರ್‌ಗಳ​ ಹಾರಾಟ: ಮಿಲ್ಕಿ ಬ್ಯೂಟಿಗೆ ಮುಜುಗರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 9:57 IST
Last Updated 18 ಸೆಪ್ಟೆಂಬರ್ 2022, 9:57 IST
ತಮನ್ನಾ
ತಮನ್ನಾ   

ಹೈದರಾಬಾದ್‌:ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ ಬೌನ್ಸರ್‌ಗಳು ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ಘಟನೆ ವರದಿಯಾಗಿದೆ.

ಮಧುರ್ ಬಂಡಾರ್ಕರ್ ನಿರ್ದೇಶನದ 'ಬಬ್ಲಿ ಬೌನ್ಸರ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ತಮನ್ನಾ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರದ್ದು ವಿಭಿನ್ನ ಗೆಟಪ್‌ ಎನ್ನಲಾಗಿದೆ.

'ಬಬ್ಲಿ ಬೌನ್ಸರ್' ಸಿನಿಮಾದ ಪ್ರಚಾರ ಕಾರ್ಯಕ್ರಮ ಸಂದರ್ಭದಲ್ಲಿ ತಮನ್ನಾ ಅವರ ಫೋಟೊಗಳನ್ನು ತೆಗೆಯಲು ಫೋಟೊಗ್ರಾಫರ್ಗಳು ಮುಂದಾಗಿದ್ದರು. ಅಲ್ಲದೇ ಕೆಲವರು ಬೈಟ್ ತೆಗೆದುಕೊಳ್ಳಲು ಮುಂದೆ ಬಂದಿದ್ದರು. ಈ ವೇಳೆ ತಮನ್ನಾ ಬೌನ್ಸರ್ಗಳು ಫೋಟೊಗ್ರಾಫರ್ ಮತ್ತು ಪತ್ರಕರ್ತರನ್ನು ತಡೆದಿದ್ದಾರೆ. ಹಾಗೇ ಬೈಟ್ ತೆಗೆದುಕೊಳ್ಳಲು ಅವಕಾಶ ನೀಡದೆ ಅನುಚಿತ ವರ್ತನೆ ತೋರಿದ್ದಾರೆ.

ADVERTISEMENT

ಅಲ್ಲದೇ ಬೌನ್ಸರ್‌ಗಳು ಕೆಟ್ಟ ಪದಗಳಿಂದ ಪತ್ರಕರ್ತರನ್ನು ನಿಂದಿಸಿದ್ದಾರೆ. ಹಾಗೇ ಕೆಲವರ ಮೇಲೆ ದೈಹಿಕ ಹಲ್ಲೆಗೆ ಮುಂದಾಗಿದ್ದಾರೆ. ಈ ಘಟನೆಯನ್ನು ಕೆಲವರು ವಿಡಿಯೊ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ತಮನ್ನಾ ಬೌನ್ಸರ್‌ಗಳ ವರ್ತನೆಯಲ್ಲಿ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಖಂಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರ ಮುಂದೆ ನಡೆದ ಘಟನೆ, ತಮನ್ನಾ ಅವರನ್ನು ಮುಜುಗರಕ್ಕೀಡು ಮಾಡಿದೆ ಎಂದು ಆಪ್ತರು ಹೇಳಿದ್ದಾರೆ.

'ಬಬ್ಲಿ ಬೌನ್ಸರ್ 'ಚಿತ್ರ ಒಟಿಟಿಯಲ್ಲಿ (ಡಿಸ್ನಿ ಹಾಟ್‌ಸ್ಟಾರ್‌)ಇದೇ 23ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.