ADVERTISEMENT

‘ಮಾಸ್ಟರ್‌’ಗಾಗಿ ಮೀಸೆ ತೆಗೆದ ವಿಜಯ್‌!

ಕಾಲಿವುಡ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 19:30 IST
Last Updated 5 ಜನವರಿ 2020, 19:30 IST
‘ಬಿಗಿಲ್’ ಚಿತ್ರದಲ್ಲಿ ವಿಜಯ್, ನಯನತಾರಾ
‘ಬಿಗಿಲ್’ ಚಿತ್ರದಲ್ಲಿ ವಿಜಯ್, ನಯನತಾರಾ   

ದಕ್ಷಿಣ ಭಾರತದ ಖ್ಯಾತ ತಮಿಳು ನಟ ವಿಜಯ್‌ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ಗಡ್ಡ, ಮೀಸೆ ತೆಗೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಮಾಸ್ಟರ್‌’ ಚಿತ್ರಕ್ಕಾಗಿ ವಿಜಯ್‌ ಮೀಸೆ ತೆಗೆಸಿದ್ದು, ಇದು ಅವರ 64ನೇ ಚಿತ್ರ. ವಿಜಯ್‌ ಸೇತುಪತಿ ಕೂಡ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ದೆಹಲಿ ಮತ್ತು ಕರ್ನಾಟಕದ ಶಿವಮೊಗ್ಗದಲ್ಲಿ ಚಿತ್ರೀಕರಣ ಮುಗಿಸಿರುವ‘ಮಾಸ್ಟರ್‌‘ ಚಿತ್ರತಂಡ ಈಗ ಚೆನ್ನೈನಲ್ಲಿ ಭರದಿಂದ ಶೂಟಿಂಗ್‌ ನಡೆಸುತ್ತಿದೆ.

ಗಡ್ಡ, ಮೀಸೆ ಬೋಳಿಸಿಕೊಂಡವಿಜಯ್‌ ಚೆನ್ನೈನ ಜೈಲಿನಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅವರನ್ನು ತಕ್ಷಣಕ್ಕೆ ಗುರುತಿಸುವುದು ಸಾಧ್ಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ವಿಜಯ್‌ ಅಭಿನಯದ ‘ಬಿಗಿಲ್‌’ ಭಾರಿ ಯಶಸ್ಸು ಗಳಿಸಿತ್ತು. ಈ ಚಿತ್ರಕ್ಕೆ ಅಟ್ಲೀ ಆ್ಯಕ್ಷನ್‌ ಕಟ್‌ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.