
ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್
ಚಿತ್ರ: ಯ್ಯೂಟೂಬ್
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಹಾಗೂ ಹಾಡಿಗೆ ಸ್ಫೂರ್ತಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಮೂಲತಃ ತಮಿಳುನಾಡಿನವರಾದರೂ ಕನ್ನಡದ ಭಕ್ತಿಗೀತೆಯಾಗಿರುವ ‘ಮಾದೇಶ್ವರ ದಯೆಬಾರದೆ’ ಹಾಡನ್ನು ಬಹಳ ಸೋಗಸಾಗಿ ಹಾಡಿದ್ದಾರೆ. ಇದೇ ಹಾಡಿಗೆ ಮಾದಪ್ಪನ ಭಕ್ತರು ಮನಸೋತಿದ್ದಾರೆ. ಈ ವಿಡಿಯೊವನ್ನು ಶಿವಶ್ರೀ ಸ್ಕಂದಪ್ರಸಾದ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಶಿವಶ್ರೀ ಸ್ಕಂದಪ್ರಸಾದ್ ಪೋಸ್ಟ್‌ನಲ್ಲಿ ಏನಿದೆ?
‘ಇತ್ತೀಚೆಗೆ ನನಗೆ ಮಹಾದೇವಸ್ವಾಮಿಯ ಈ ಸುಂದರ ಹಾಡು ನನ್ನ ಗಂಡನ ಮೂಲಕ ಗೊತ್ತಾಯ್ತು. ಈ ಹಾಡನ್ನು ಅವರು ಬಹಳ ಇಷ್ಟಪಡುತ್ತಾರೆ. ಅವರು ಈ ಹಾಡನ್ನು ಆಗಾಗ್ಗೆ ಭಕ್ತಿಯಿಂದ ಹಾಡುತ್ತಿರುತ್ತಾರೆ. ಆಗ ಈ ಹಾಡು ನಿಧಾನವಾಗಿ ನನ್ನ ಹೃದಯಕ್ಕೂ ಇಳಿಯಿತು. ಈ ಹಿಂದಿನ ಕಾರ್ತಿಕ ಮಾಸದಲ್ಲಿ ಅವರು ಅದನ್ನು ಹಲವು ಬಾರಿ ಕೇಳುತ್ತಿದ್ದರು, ಮತ್ತು ಪ್ರತಿ ಬಾರಿಯೂ ಅವರ ಧ್ವನಿ ಮತ್ತು ಅದರಲ್ಲಿರುವ ಭಕ್ತಿ ಎದ್ದು ಕಾಣುತ್ತಿತ್ತು. ಈ ಹಾಡನ್ನು ಹಾಡಲು ನನ್ನ ಪತಿಯೇ ಸ್ಪೂರ್ತಿ’.
‘ಕೆಲವು ಹಾಡುಗಳು ವಿಶೇಷವಾಗಿರುತ್ತವೆ. ಆದ್ದರಿಂದ ಇಂದು ನಾನು ನನ್ನದೇ ಆದ ವಿನಮ್ರ ಪ್ರದರ್ಶನವನ್ನು ನೀಡುತ್ತಿದ್ದೇನೆ. ಇದನ್ನು ಯಾವುದೇ ಪ್ರದರ್ಶನವಾಗಿ ಹಾಡಿಲ್ಲ, ಆದರೆ ನಮ್ಮ ಮನೆಗಳನ್ನು ರಕ್ಷಿಸುವ, ಮಾರ್ಗದರ್ಶನ ನೀಡುವ ಮತ್ತು ಶಕ್ತಿ ತುಂಬುವ ಮಹಾದೇವಸ್ವಾಮಿಗಾಗಿ ಈ ಹಾಡು ಸಮರ್ಪಣೆ’ ಎಂದು ಬರೆದುಕೊಂಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ತಮಿಳುನಾಡು ಮೂಲದವರಾಗಿದ್ದಾರೆ. ಗಾಯಕಿ ಮತ್ತು ನೃತ್ಯಗಾರ್ತಿಯಾದ ಶಿವಶ್ರೀ ಅವರು ಮಾರ್ಚ್‌ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಮದುವೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.