ADVERTISEMENT

ತೆಲುಗು ನಟ ಜಯ ಪ್ರಕಾಶ್‌ ರೆಡ್ಡಿ ಹೃದಯಾಘಾತದಿಂದ ನಿಧನ

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 4:34 IST
Last Updated 8 ಸೆಪ್ಟೆಂಬರ್ 2020, 4:34 IST
ನಟ ಜಯ ಪ್ರಕಾಶ್‌ ರೆಡ್ಡಿ (ಸಂಗ್ರಹ ಚಿತ್ರ)
ನಟ ಜಯ ಪ್ರಕಾಶ್‌ ರೆಡ್ಡಿ (ಸಂಗ್ರಹ ಚಿತ್ರ)   

ಅಮರಾವತಿ: ತೆಲುಗು ನಟ ಜಯ ಪ್ರಕಾಶ್‌ ರೆಡ್ಡಿ (74) ಅವರು ಮಂಗಳವಾರ ಬೆಳಿಗ್ಗೆ ಗುಂಟೂರಿನತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜಯ ಪ್ರಕಾಶ್‌ ರೆಡ್ಡಿ ಖಳನಾಯಕ ಮತ್ತು ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ‘ಸಮರಸಿಂಹ ರೆಡ್ಡಿ, ಪ್ರೇಮಿಂಚುಕುಂದಮು ರಾ, ನರಸಿಂಹ ನಾಯ್ಡು, ರೆಡಿ, ಕಿಕ್, ಜಯಂ ಮನದೇರಾ, ಜಂಬಾ ಲಕಿಡಿ ಪಂಬಾ’ ಪ್ರಮುಖವಾಗಿವೆ.

ಇದೇ ವರ್ಷ ಜನವರಿಯಲ್ಲಿ ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಜಯಪ್ರಕಾಶ್‌ ಕಾಣಿಸಿಕೊಂಡಿದ್ದರು.

ADVERTISEMENT

ನಟನ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ನಟ–ನಟಿಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.