
ಪ್ರಜಾವಾಣಿ ವಾರ್ತೆಶಿವಾಜಿ
ಬೆಂಗಳೂರು: ಸಿನಿಮಾ, ಧಾರಾವಾಹಿ ನಟಿಯರ ಉಡುಗೆ ತೊಡುಗೆ ಬಗ್ಗೆ ಮಾತನಾಡಿ ತೆಲುಗಿನ ಶಿವಾಜಿ ಎನ್ನುವ ನಟ ಮಹಿಳಾಮಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶಿವಾಜಿ ಅವರ ಸಿನಿಮಾ ‘ದಂಡೋರಾ’ ಬಿಡುಗಡೆಗೆ ಸಿದ್ದವಾಗಿದೆ. ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಟಿಯರಿಗೆ ಪುಕ್ಕಟ್ಟೆ ಸಲಹೆ ಕೊಡಲು ಫಜೀತಿಗೆ ಸಿಲುಕಿದ್ದಾರೆ.
‘ನಟಿಯರು ಮೈ ಕಾಣುವ ತರ ಬಟ್ಟೆ ಹಾಕೋಬಾರದು. ಹಾಗೇ ಹಾಕೊಂಡರೆ ನಮ್ಮಗಳ ತಲೆ ಕೆಡುತ್ತವೆ. ಲಕ್ಷಣವಾಗಿ ಸೀರೆ ಉಡಬೇಕು. ಹಾಗಿದ್ದಾಗ ಮಾತ್ರ ಮಹಿಳೆಯರಿಗೆ ಗೌರವ’ ಎಂಬ ಅರ್ಥದಲ್ಲಿ ಸಲಹೆ ನೀಡಿದ್ದಾರೆ.
ಶಿವಾಜಿ ಅವರ ಹೇಳಿಕೆಯನ್ನು ಟಾಲಿವುಡ್‌ನ ಅನೇಕ ನಟ–ನಟಿಯರು ವಿರೋಧಿಸಿದ್ದಾರೆ. ಬಳಿಕ ಅವರು ನನ್ನ ಉದ್ದೇಶ ಸರಿಯಾಗಿತ್ತು. ಆದರೆ, ನಾನು ಬಳಸಿದ ಪದಗಳು ಸರಿ ಇರಲಿಲ್ಲ ಎಂದು ಕ್ಷಮೆ ಕೇಳಿದ್ದಾರೆ.
ಶಿವಾಜಿ ಅವರು ಕೆಲ ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದು, ಬಿಗ್‌ಬಾಸ್‌ಗೂ ಪ್ರವೇಶ ಮಾಡಿದ್ದರು.