ADVERTISEMENT

ತೆಲುಗು ಸಿನಿಮಾ ನಿರ್ದೇಶಕ, ನಿರ್ಮಾಪಕ ವಿಜಯ‌ ಬಾಪಿನೀಡು ಇನ್ನಿಲ್ಲ

ಪಿಟಿಐ
Published 13 ಫೆಬ್ರುವರಿ 2019, 1:30 IST
Last Updated 13 ಫೆಬ್ರುವರಿ 2019, 1:30 IST
ವಿಜಯ‌ ಬಾಪಿನೀಡು
ವಿಜಯ‌ ಬಾಪಿನೀಡು   

ಹೈದರಬಾದ್‌: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಸಿನಿಮಾದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ವಿಜಯ‌ ಬಾಪಿನೀಡು ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83ವರ್ಷ ವಯಸ್ಸಾಗಿತ್ತು.

’ಅಮೆರಿಕದಲ್ಲಿ ನೆಲೆಸಿರುವ ಹಿರಿಯ ಮಗಳು ಭಾರತಕ್ಕೆ ಮರಳಿದ ಬಳಿಕ ಅವರ ಅಂತ್ಯಕ್ರಿಯೆ ನೆರವೇರಲಿದೆ‘ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವಿಜಯ ಅವರು ಮೆಗಾಸ್ಟಾರ್‌ ಚಿರಂಜೀವಿ, ಶೋಭನ್‌ ಬಾಬು, ಕೃಷ್ಣ ಸೇರಿದಂತೆ ಅನೇಕ ನಾಯಕರ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು.

ADVERTISEMENT

ಇವರು ನಿರ್ದೇಶಿಸಿದ ನಟ ಚಿರಂಜೀವಿ ನಟಿಸಿದ ‘ಗ್ಯಾಂಗ್‌ಲೀಡರ್‌’ಸಿನಿಮಾವು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ‘ಆಜ್‌ ಕಾ ಗೂಂಡಾರಾಜ್‌’ಹೆಸರಿನಲ್ಲಿ ಹಿಂದಿಯಲ್ಲಿ ಇದೇ ಸಿನಿಮಾ ನಿರ್ಮಾಣಗೊಂಡಿತ್ತು.ಇದಲ್ಲದೇ, ಚಿರಂಜೀವಿ ಜೊತೆಗೆ ‘ಬಿಗ್‌ಬಾಸ್‌’, ‘ಕೈದಿ ನಂ.786’, ಹಾಗೂ ‘ಮಗಧೀರುಡು’ಕೂಡ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು.

ಬಾಪಿನೀಡು ಅವರ ಮೃತದೇಹಕ್ಕೆ ಚಿರಂಜೀವಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಇಂದು ನನ್ನ ಪಾಲಿಗೆ ಅತ್ಯಂತ ಕೆಟ್ಟ ದಿನ, ನನ್ನ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ಭಾವನೆಯಾಗುತ್ತಿದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.