ADVERTISEMENT

ಬಾರದ ಫಿಲಂಫೇರ್‌: ಅವಾರ್ಡ್‌ ಶೋಗಳಿಗೆ ಗುಡ್‌ಬೈ ಹೇಳಿದ ಚಿತ್ರಸಾಹಿತಿ ಮನೋಜ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 11:32 IST
Last Updated 17 ಫೆಬ್ರುವರಿ 2020, 11:32 IST
ಮನೋಜ್‌
ಮನೋಜ್‌   
""

ಫಿಲಂಫೇರ್‌ನಲ್ಲಿ ಪ್ರಶಸ್ತಿ ದೊರೆಯದ್ದಕ್ಕೆ ಬೇಸರಗೊಂಡಬಾಲಿವುಡ್‌ ಚಿತ್ರ ಸಾಹಿತಿ ಮನೋಜ್‌ ಮನ್ತಾಶೀರ್‌ ಅವರುಪ್ರಶಸ್ತಿ ಸಮಾರಂಭಗಳಿಗೇ ಗುಡ್‌ಬೈ ಹೇಳಿದ್ದು, ತಾನು ಬದುಕಿರುವವರೆಗೂ ಅಂತಹ ಯಾವುದೇ ಕಾರ್ಯಕ್ರಮಗಳಿಗೆ ಹೋಗುವು‌ದಿಲ್ಲ ಎಂದು ಬರೆದುಕೊಂಡಿದ್ದಾರೆ.

ಫಿಲಂಫೇರ್‌ನಚಿತ್ರ ಸಾಹಿತ್ಯ ವಿಭಾಗದಲ್ಲಿ ಮನೋಜ್‌ ಮನ್ತಾಶೀರ್‌ ಅವರು, ಅಕ್ಷಯ್ ಕುಮಾರ್ ಅಭಿನಯದ ತೇರಿ ಮಿಟ್ಟಿ ಸಿನಿಮಾದ ಜನಪ್ರಿಯ ಹಾಡು ‘ತೂ ಕಹೀ ಥೆ ತೇರಾ ಚಾಂದ್..’ ಸಾಹಿತ್ಯಕ್ಕಾಗಿ ನಾಮನಿರ್ದೇಶನ ಗೊಂಡಿದ್ದರು. ಆದರೆ, ಪ್ರಶಸ್ತಿಯು ಗಲ್ಲಿ ಬಾಯ್‌ ಸಿನಿಮಾದ ‘ಅಪ್ನ ಟೈಂ ಆಯೇಗಾ..’ ಹಾಡಿನಸಾಹಿತಿಗಳಾದ ಡಿವೈನ್‌ ಮತ್ತು ಅಂಕುರ್‌ ತಿವಾರಿಗೆ ದೊರೆಯಿತು.

ಇದರಿಂದ ಬೇಸರಗೊಂಡ ಮನೋಜ್‌, ‘ಡಿಯರ್ ಅವಾರ್ಡ್ಸ್‌... ನನ್ನ ಜೀವನವೆಲ್ಲ ಪ್ರಯತ್ನಿಸಿದರೂ ನನಗೆ ‘ತೂ ಕಹೀ ಥೆ ತೇರಾ ಚಾಂದ್..’ ನಂತಹ ಉತ್ತಮ ಸಾಲುಗಳನ್ನು ಬರೆಯಲು ಸಾಧ್ಯವಿಲ್ಲ. ಎಲ್ಲರ ಮನಸ್ಸನ್ನು ಗೆದ್ದಿರುವ ಹಾಡಿಗೆ ಮನ್ನಣೆ ನೀಡುವಲ್ಲಿ ನೀವು ಸೋತಿದ್ದೀರಿ. ಇದು ನನ್ನ ಕಲೆಗೆ ತೋರುತ್ತಿರುವ ಅಗೌರವ.. ಹಾಗಾಗಿ ಇದೊ ನಿಮಗೆ ನನ್ನ ಅಂತಿಮ ವಿದಾಯ ಹೇಳುತ್ತಿದ್ದೇನೆ. ಅಧಿಕೃತವಾಗಿ ನಾನು ಘೋಷಿಸುತ್ತಿದ್ದೇನೆ.. ನನ್ನ ಕೊನೆಯ ಉಸಿರಿರುವವರೆಗೂ ನಾನು ಯಾವುದೇ ಪ್ರಶಸ್ತಿ ಸಮಾರಂಭಕ್ಕೆ ಹೋಗುವುದಿಲ್ಲ’ ಎಂದು ಟ್ವಿಟ್ಟರ್‌ನಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.‌

ADVERTISEMENT

ಇವರ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ #BoycottFilmfare ಎನ್ನುವುದು ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಲು ಶುರುವಾಯಿತು. ಪ್ರಶಸ್ತಿ ನ್ಯಾಯಯುತವಾಗಿ ನೀಡಲಾಗುತ್ತಿದೆಯೇ ಎನ್ನುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಮತ್ತು ‘ಫಿಲಂಫೇರ್‌ದುಡ್ಡು ಕೊಟ್ಟು ಪಡೆಯುವ ಪ್ರಶಸ್ತಿಯಾಗಿದೆ’ ಎಂದೂ ಟೀಕಿಸಿದ್ದಾರೆ. ಕೇಸರಿಯಂಥ ಸಿನಿಮಾಗೂ ಪ್ರಶಸ್ತಿ ಬಾರದೆ ಇರುವುದಕ್ಕೂ ಜನ ಬೇಸರ ವ್ಯಕ್ತಪಡಿಸಿದ್ದಾರೆ.

‘ಗಲ್ಲಿಬಾಯ್‌’– ಫಿಲಂಫೇರ್‌ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದ ಎಲ್ಲ 13 ವಿಭಾಗಗಳಲ್ಲೂ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇಲ್ಲಿವರೆಗೆ 11 ಪ್ರಶಸ್ತಿಗಳನ್ನು ಗಳಿಸಿದ್ದ ‘ಬ್ಲಾಕ್’ ಅತಿಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹೊಂದಿತ್ತು. ಗುವಾಹಟಿಯಲ್ಲಿ ಶನಿವಾರ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.