ಕನ್ಯಾಕುಮಾರಿಯ ಮಾಯಾಪುರಿ ವ್ಯಾಕ್ಸ್ ಮ್ಯೂಸಿಯಂಗೆ ದಳಪತಿ ನಟ ವಿಜಯ್ ಮೇಣದ ಪ್ರತಿಮೆ ಹೊಸದಾಗಿ ಸೇರ್ಪಡೆಯಾಗಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ. ಈ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದುಅಭಿಮಾನಿಗಳ ಹೊಸ ಕ್ರೇಜ್ ಆಗಿದೆ.
ಈ ಮ್ಯೂಸಿಯಂನಲ್ಲಿ ತಮಿಳು ನಟರೊಬ್ಬರ ಮೇಣದ ಪ್ರತಿಮೆ ಇದೇ ಮೊದಲು. ಎಪಿಜೆ ಅಬ್ದುಲ್ ಕಲಾಂ, ಅಮಿತಾಭ್ ಬಚ್ಚನ್, ಮೈಕೆಲ್ ಜಾಕ್ಸನ್, ಎಂ.ಎಸ್. ಸುಬ್ಬಲಕ್ಷ್ಮಿ ಮೇಣದ ಪ್ರತಿಮೆಗಳ ಸಾಲಿಗೆ ಈಗ ವಿಜಯ್ ಸೇರ್ಪಡೆಯಾಗಿದ್ದಾರೆ. ವಿಜಯ್ ಅಭಿಯನದ ‘ಬಿಗಿಲ್’ ಚಿತ್ರ ತಮಿಳುನಾಡಿನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.