ADVERTISEMENT

'ದಿ ಡರ್ಟಿ ಪಿಕ್ಚರ್' ನಟಿ ಆರ್ಯ ಬ್ಯಾನರ್ಜಿ ಮೃತದೇಹ ಪತ್ತೆ

ಏಜೆನ್ಸೀಸ್
Published 12 ಡಿಸೆಂಬರ್ 2020, 9:07 IST
Last Updated 12 ಡಿಸೆಂಬರ್ 2020, 9:07 IST
ದಿ ಡರ್ಟಿ ಪಿಕ್ಚರ್‌ನಲ್ಲಿ ವಿದ್ಯಾ ಬಾಲನ್ ಜೊತೆ ನಟಿ ಆರ್ಯ ಬ್ಯಾನರ್ಜಿ (ಇನ್‌ಸ್ಟಾಗ್ರಾಂ ಚಿತ್ರ)
ದಿ ಡರ್ಟಿ ಪಿಕ್ಚರ್‌ನಲ್ಲಿ ವಿದ್ಯಾ ಬಾಲನ್ ಜೊತೆ ನಟಿ ಆರ್ಯ ಬ್ಯಾನರ್ಜಿ (ಇನ್‌ಸ್ಟಾಗ್ರಾಂ ಚಿತ್ರ)   

ಕೋಲ್ಕತ್ತ: 'ದಿ ಡರ್ಟಿ ಪಿಕ್ಚರ್', 'ಲವ್ ಸೆಕ್ಸ್ ಔರ್ ಧೋಖಾ' ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಬಂಗಾಳ ನಟಿ ಆರ್ಯ ಬ್ಯಾನರ್ಜಿ, ಮೃತದೇಹವು ಕೋಲ್ಕತ್ತದ ನಿವಾಸದಲ್ಲಿ ಪತ್ತೆಯಾಗಿದೆ.

ದಕ್ಷಿಣ ಕೋಲ್ಕತ್ತದಲ್ಲಿರುವ ನಿವಾಸದಲ್ಲಿ ನಟಿ ಆರ್ಯ ಬ್ಯಾನರ್ಜಿ, ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಅನುಮಾನಾಸ್ಪದ ಸಾವಿನ ಪ್ರಕರಣವೆಂದು ಪರಿಗಣಿಸಲಾಗಿದೆ.

ಪೊಲೀಸರು ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಬಾಗಿಲು ಒಡೆದು ತೆರೆದು ಪರಿಶೀಲಿಸಿದಾಗ 33 ವರ್ಷದ ನಟಿ ಶವ ಬೆಡ್‌ರೂಂನಲ್ಲಿ ಪತ್ತೆಯಾಗಿತ್ತು.

ADVERTISEMENT

ದೇವದತ್ತ ಎಂಬ ಹೆಸರಿನಿಂದಲೂ ಕರೆಯಲ್ಪಡುವ ನಟಿ, ಕೋಲ್ಕತ್ತದ ಜೋಧ್‌ಪುರ್ ಪಾರ್ಕ್‌ನಲ್ಲಿ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಟಿ ಮುಂಬೈನಲ್ಲಿ ರೂಪದರ್ಶಿಯಾಗಿಯೂ ಗುರುತಿಸಿದ್ದರು.

ಆಹಾರ ವಾಂತಿ ಮಾಡಿರುವ ಲಕ್ಷ್ಮಣಗಳು ಕಂಡುಬಂದಿದ್ದು, ಮುಖ ಕೆಳಕ್ಕೆ ಮಾಡಿಕೊಂಡು ಮಲಗಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಾಗೆಯೇ ನೆಲದಲ್ಲಿ ರಕ್ತದ ಹನಿ ಪತ್ತೆ ಹಚ್ಚಲಾಗಿದೆ.

ಮನೆ ಕೆಲಸದಾಳು ಬೆಲ್ ಒತ್ತಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಟಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ತದಾ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.