ADVERTISEMENT

ಮತ್ತೊಂದು ಮಾದಕ ಬೀಚ್ ಫೋಟೊ.. ಹೀಗಿತ್ತು ದಿಶಾ ಪಟಾನಿಗೆ ಟೈಗರ್ ಶ್ರಾಫ್ ಕಾಮೆಂಟ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 4:35 IST
Last Updated 10 ಜನವರಿ 2022, 4:35 IST
   

ನವದೆಹಲಿ: ಬಾಲಿವುಡ್ ನಟಿ ದಿಶಾ ಪಟಾನಿಯವರ ಬೀಚ್ ಪೋಸ್ಟ್‌ಗಳು ಮತ್ತು ಅದ್ಭುತ ಈಜುಡುಗೆಯ ಚಿತ್ರಗಳನ್ನು ನೋಡಿದರೆ ಹೆಚ್ಚೆಚ್ಚು ಬೀಚ್‌ನಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ ಎಂಬುದು ಅರ್ಥವಾಗುತ್ತದೆ.

ಚಿತ್ರೀಕರಣದ ಬಳಿಕ ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುವ ಅವರು ಬಿಡುವಿನ ವೇಳೆಯಲ್ಲಿ ಬೀಚ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ, ಗುಲಾಬಿ ಬಣ್ಣದ ಬಿಕಿನಿ ತೊಟ್ಟು ಬೀಚ್‌ನಲ್ಲಿ ತೆಗೆಸಿಕೊಂಡಿರುವ ಮತ್ತೊಂದು ಮಾದಕ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ದಿಶಾ ಅವರ ಈ ಸೆಕ್ಸಿ ಪೋಸ್‌ಗೆ ಬಾಯ್‌ಫ್ರೆಂಡ್ ಟೈಗರ್ ಶ್ರಾಫ್ ಫೈರ್ ಎಮೋಜಿಗಳನ್ನು ಹರಿಬಿಟ್ಟಿದ್ದಾರೆ.

ADVERTISEMENT

ಅಂದಹಾಗೆ. ತನ್ನ ಮೋಹಕ ಚಿತ್ರಗಳ ಮೂಲಕ ದಿಶಾ ಪಟಾನಿ ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತಿರುವುದು ಇದೇ ಮೊದಲಲ್ಲ. ಎರಡು ದಿನಗಳ ಹಿಂದಷ್ಟೇ ಆಕರ್ಷಕ ಬಿಕಿನಿಯ ಟಾಪ್ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಮತ್ತೊಮ್ಮೆ ಈಗ ಫ್ಯಾಶನ್ ಪ್ರಿಯರ ನೆಚ್ಚಿನ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ದಿಶಾ ಪಟಾನಿ ಇತ್ತೀಚೆಗೆ ಯೋಧಾ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ರಾಶಿ ಖನ್ನಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಹ ಇದರಲ್ಲಿ ನಟಿಸಿದ್ದು, ಧರ್ಮ ಪ್ರೊಡಕ್ಷನ್ಸ್‌ನ ಮೊದಲ ಆಕ್ಷನ್ ಚಿತ್ರವಾಗಿದೆ. ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ತಂಡದೊಂದಿಗೆ ಒಂದೆರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದ ಅವರು, ‘ಇಂತಹ ಅದ್ಭುತ ಅನುಭವಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದಗಳು’ಎಂದು ಬರೆದುಕೊಂಡಿದ್ದರು.

ದಿಶಾ ಪಟಾನಿ ಕಟ್ಟು ನಿಟ್ಟಾದ ಫಿಟ್‌ನೆಸ್ ನಿಯಮವನ್ನು ಅನುಸರಿಸುತ್ತಾರೆ ಎಂಬುದು ಈ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ಈ ಹಿಂದೆ ಅವರು ಜಿಮ್ ಉಡುಗೆಯಲ್ಲಿ ಕನ್ನಡಿಯ ಮುಂದೆ ಸ್ಟಂಟ್ ಮಾಡುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಯೂ ಟೈಗರ್ ಶ್ರಾಫ್, ಬೆಂಕಿ ಮತ್ತು ಚಪ್ಪಾಳೆ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.