ADVERTISEMENT

ಹೀರೋಪಂತಿ 2 ಟ್ರೈಲರ್ ಬಿಡುಗಡೆ: ಸೈಬರ್ ಕ್ರಿಮಿನಲ್‌ಗೆ ‘ಟೈಗರ್’ ಸ್ಕೆಚ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 11:26 IST
Last Updated 17 ಮಾರ್ಚ್ 2022, 11:26 IST
ಹೀರೋಪಂತಿ 2
ಹೀರೋಪಂತಿ 2   

ಬೆಂಗಳೂರು: ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಹೀರೋಪಂತಿ2’ ಟ್ರೈಲರ್ ಇಂದು ಬೆಳಿಗ್ಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಟ್ರೈಲರ್ ನೋಡಿದ ನೆಟ್ಟಿಗರು, ‘ಟೈಗರ್ ಶ್ರಾಫ್ ಸಾಹಸ ದೃಶ್ಯದ ಸನ್ನಿವೇಶಗಳನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದೇವೆ’ ಎಂದಿದ್ದಾರೆ.

ನಟ ನವಾಜುದ್ದೀನ್ ಸಿದ್ಧಿಕಿ ಇಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದು ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ. ಲೈಲಾ ಎಂಬ ಮಹಾನ್ ಸೈಬರ್ ಕ್ರಿಮಿನಲ್ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ. ಲೈಲಾನನ್ನು ಮಟ್ಟ ಹಾಕುವ ಬಬ್ಲೂ ರಾಣಾವತ್ ಪಾತ್ರದಲ್ಲಿ ಟೈಗರ್ ಶ್ರಾಫ್ ಮಿಂಚಿದ್ದಾರೆ.

ADVERTISEMENT

ಟೈಗರ್‌ಗೆ ಜೊತೆಯಾಗಿ ತಡಪ್ ಖ್ಯಾತಿಯ ತಾರಾ ಸುತಾರಿಯಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಹಮದ್ ಖಾನ್ ನಿರ್ದೇಶನವಿದ್ದು, ಸಾಜಿದ್ ನಾಡಿಯಾಡವಾಲಾ ನಿರ್ಮಾಣವಿದೆ. ಹೀರೋಪಂತಿ2 ಈದ್ ಹಬ್ಬದ ಪ್ರಯುಕ್ತ ಏಪ್ರಿಲ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.