ADVERTISEMENT

ಕ್ಯಾನ್ಸರ್‌ ಪೀಡಿತ ಮಕ್ಕಳಿಗಾಗಿ ‘ಸೂಪರ್ ಹೀರೊ’ ಆದ ನಟ ಟೈಗರ್ ಶ್ರಾಫ್

ಪಿಟಿಐ
Published 14 ಸೆಪ್ಟೆಂಬರ್ 2025, 10:26 IST
Last Updated 14 ಸೆಪ್ಟೆಂಬರ್ 2025, 10:26 IST
<div class="paragraphs"><p>ನಟ&nbsp;ಟೈಗರ್ ಶ್ರಾಫ್</p></div>

ನಟ ಟೈಗರ್ ಶ್ರಾಫ್

   

ನವದೆಹಲಿ: ಬಾಲಿವುಡ್‌ ನಟ ಟೈಗರ್‌ ಶ್ರಾಫ್ ‘ಸೂಪರ್‌ ಹೀರೊ’ ರೀತಿಯಲ್ಲಿ ಉಡುಗೆ ತೊಟ್ಟು ಕ್ಯಾನ್ಸರ್‌ ಪೀಡಿತ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ.  

ಇತ್ತೀಚೆಗೆ ಬಿಡುಗಡೆಗೊಂಡ ‘ಎ ಫ್ಲೈಯಿಂಗ್ ಜಾಟ್’ ಸಿನಿಮಾದಲ್ಲಿ ಶ್ರಾಫ್ ಸೂಪರ್‌ ಹೀರೊ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ರೀತಿಯ ಉಡುಗೆ ತೊಟ್ಟು ಕ್ಯಾನ್ಸರ್‌ ರೋಗಿಗಳಿಗೆ ನೆರವು ನೀಡುವ ಸಂಸ್ಥೆಯೊಂದಿಗೆ ಜೊತೆಯಾಗಿ ಮಕ್ಕಳನ್ನು ಭೇಟಿಯಾಗಿದ್ದಾರೆ.

ಈ ವೇಳೆ ಅವರು ಮಕ್ಕಳಿಗೆ ಗುಲಾಬಿ ಹೂ ಮತ್ತು ಬ್ಯಾಗ್‌ಗಳನ್ನು ನೀಡಿ, ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಇದು ತುಂಬಾ ಸುಂದರವಾಗಿದೆ. ಈ ಪುಟ್ಟ ಮಕ್ಕಳಿಗಾಗಿಯೇ ‘ಎ ಫ್ಲೈಯಿಂಗ್ ಜಾಟ್’ ಸಿನಿಮಾವನ್ನು ಮಾಡಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶ್ರಾಫ್‌ಗೆ ಜಾಕ್ವಲಿನ್‌ ಫರ್ನಾಂಡಿಸ್ ಜೊತೆಯಾಗಿದ್ದಾರೆ.

ಶ್ರಾಫ್ ನಟನೆಯ ’ಬಾಗಿ–4’ ಚಿತ್ರ ಸೆ.5ರಂದು ತೆರೆಕಂಡಿದೆ. ಈ ಸಿನಿಮಾವನ್ನು ಕನ್ನಡದ ನಿರ್ದೇಶಕ ಎ. ಹರ್ಷ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.