ADVERTISEMENT

ಅಖಿಲ್‌ ಜತೆ ಕಿಯಾರಾ?

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:15 IST
Last Updated 24 ಮಾರ್ಚ್ 2019, 20:15 IST
ಕಿಯಾರಾ ಅಡ್ವಾನಿ
ಕಿಯಾರಾ ಅಡ್ವಾನಿ   

ಕಳಂಕ್‌, ಕಬೀರ್‌ ಸಿಂಗ್‌ ಮತ್ತು ಪೃಥ್ವಿರಾಜ್ ಚೌಹಾಣ್‌ ಚಿತ್ರಗಳಲ್ಲಿ ನಟಿಸುತ್ತಿರುವ ಹಿಂದಿಯ ಬ್ಯುಸಿ ನಟಿ ಕಿಯಾರಾ ಅಡ್ವಾನಿ ಟಾಲಿವುಡ್‌ನಲ್ಲಿ ಮತ್ತೊಂದು ಚಿತ್ರದ ಕತೆ ಕೇಳಿಸಿಕೊಂಡಿದ್ದಾರೆ.ಕಿಯಾರಾ ಟಾಲಿವುಡ್‌ಗೆ ಕಾಲಿಟ್ಟದ್ದು ಬ್ಲಾಕ್‌ಬಸ್ಟರ್‌ ಸಿನಿಮಾ ‘ಭರತ್‌ ಅನಿ ನೇನು’ ಮೂಲಕ. ಹಾಗಾಗಿ ಎರಡನೇ ಚಿತ್ರದ ಈ ಅವಕಾಶವನ್ನು ಒಪ್ಪಿಕೊಳ್ಳುತ್ತಾರೆ ಎಂಬುದು ಅವರ ಆಪ್ತರ ವಿಶ್ವಾಸ.

‘ಪಾರುಗು’ ನಿರ್ದೇಶಕ ಬೊಮ್ಮಾರಿಲು ಭಾಸ್ಕರ್ ತಮ್ಮ ಹೊಸ ಚಿತ್ರದಲ್ಲಿ ಕಿಯಾರಾ ಇರಬೇಕು ಎಂದು ತೀರ್ಮಾನಿಸಿದ್ದಾರಂತೆ. ಚಿತ್ರದ ನಾಯಕನಾಗಿ ಅಖಿಲ್‌ ಅಕ್ಕಿನೇನಿ ನಟಿಸುವುದು ಖಚಿತವಾಗಿದೆ. ಅಖಿಲ್‌ ಪ್ರೇಮಿಯ ಪಾತ್ರಕ್ಕೆ ಕಿಯಾರಾ ಸೂಕ್ತ ಆಯ್ಕೆ ಎಂಬುದು ಭಾಸ್ಕರ್‌ ಅಭಿಪ್ರಾಯ. ಆದರೆ ಈಗಾಗಲೇ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುವ ಕಿಯಾರಾ ಈ ವಾರಾಂತ್ಯದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರಂತೆ.

ನಿರ್ದೇಶಕ ಭಾಸ್ಕರ್‌ ಅವರೇ ತಮ್ಮ ಚಿತ್ರಕ್ಕೆ ಚಿತ್ರಕತೆಯನ್ನೂ ಬರೆಯುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ. ಗೀತಾ ಆರ್ಟ್ಸ್‌ ನಿರ್ಮಾಣದಲ್ಲಿ ಚಿತ್ರ ಮೂಡಿಬರಲಿದ್ದು, ಗೋಪಿ ಸುಂದರ್‌ ಗೀತಸಾಹಿತ್ಯ ರಚಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.