ADVERTISEMENT

ಮಲಯಾಳ ನಟ ಟೊವಿನೋಗೆ ಕಯಾದು ಜೋಡಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:02 IST
Last Updated 5 ಫೆಬ್ರುವರಿ 2026, 5:02 IST
ಕಯಾದು 
ಕಯಾದು    

ಮಲಯಾಳ ನಟ ಟೊವಿನೋ ಥಾಮಸ್‌ ನಟನೆಯ ಹೊಸ ಸಿನಿಮಾ ‘ಪಳ್ಳಿಚಟ್ಟಂಬಿ’ ಏ.9ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾದಲ್ಲಿ ಟೊವಿನೋಗೆ ಕಯಾದು ಲೋಹರ್‌ ಜೋಡಿಯಾಗಿದ್ದಾರೆ. ‌

ಚಿತ್ರತಂಡ ಅವರ ಪಾತ್ರದ ಲುಕ್‌ ಬಿಡುಗಡೆ ಮಾಡಿದೆ. ವಿಂಟೇಜ್‌ ಲುಕ್‌ನಲ್ಲಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ.  ಡಿಜೋ ಜೋಸ್ ಆಂಟೋನಿ ಸಾರಥ್ಯದ ‘ಪಳ್ಳಿಚಟ್ಟಂಬಿ’ ಸಿನಿಮಾ ಮಲಯಾಳ, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ. 

ವರ್ಲ್ಡ್ ವೈಡ್ ಫಿಲ್ಮ್ಸ್ ಮತ್ತು ಸಿ ಕ್ಯೂಬ್ ಬ್ರದರ್ಸ್ ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ನೌಫಲ್ ಮತ್ತು ಬ್ರಿಜೇಶ್ ನಿರ್ಮಿಸಿದ್ದಾರೆ. ವಿಜಯ ರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. 1950-60ರ ದಶಕದ ಸುತ್ತ ಕಥೆಯನ್ನು ಹೆಣೆಯಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.