ಬೆಂಗಳೂರು:ತ್ರಿಶಾ ಕೃಷ್ಣನ್ ಇಂದು (ಮೇ 4) 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
ತ್ರಿಶಾ,ಪುನೀತ್ ರಾಜ್‌ಕುಮಾರ್ ಜೊತೆ ’ಪವರ್ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದರು. ಅವರಿಗೆಸ್ಯಾಂಡಲ್‌ವುಡ್‌ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ತ್ರಿಶಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕಗಳು ಕಳೆದರೂ ಈಗಲೂ ಅದೇ ಚಾರ್ಮ್ ಉಳಿಸಿಕೊಂಡು ಬೇಡಿಕೆಯ ನಟಿಯಾಗಿದ್ದಾರೆ. ತೆಲುಗು, ತಮಿಳು, ಕನ್ನಡದಲ್ಲಿ ನಟಿಸಿರುವ ತ್ರಿಶಾ ಬಾಲಿವುಡ್‌ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತ್ರಿಶಾಗೆ ಅಭಿಮಾನಿಗಳು ಸೇರಿದಂತೆ ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ತ್ರಿಶಾಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.