ADVERTISEMENT

‘ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು’

​ಪ್ರಜಾವಾಣಿ ವಾರ್ತೆ
Published 23 ಮೇ 2021, 6:25 IST
Last Updated 23 ಮೇ 2021, 6:25 IST
ಉಪೇಂದ್ರ
ಉಪೇಂದ್ರ   

ಬೆಂಗಳೂರು: ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವವರಿಗೆ ನೆರವು ನೀಡುತ್ತಿರುವ ನಟ ಉಪೇಂದ್ರ, ಇದರ ಜೊತೆಗೆ ತಮ್ಮ ಪಕ್ಷ ‘ಪ್ರಜಾಕೀಯ’ದ ಚಿಂತನೆಗಳನ್ನೂ ಜನರೆದುರಿಗೆ ಇಡುತ್ತಿದ್ದಾರೆ. ಈ ಸಂದರ್ಭದಲ್ಲೇ ‘ನಾನು ಈ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೀವು ನನ್ನನ್ನು ಗೆಲ್ಲಿಸ್ತೀರಾ?’ ಎಂಬ ಪ‍್ರಶ್ನೆಯನ್ನೂ ಅಭಿಮಾನಿಗಳು, ಜನರೆದುರಿಗೆ ಉಪೇಂದ್ರ ಇರಿಸಿದ್ದಾರೆ.

ಈ ಕುರಿತು ಪತ್ರವೊಂದನ್ನು ಟ್ವಿಟರ್‌ನಲ್ಲಿ ಉಪೇಂದ್ರ ಅಪ್‌ಲೋಡ್‌ ಮಾಡಿದ್ದಾರೆ. ‘ನೋಡಿ ನಾನು ಸಮಾಜ ಸೇವೆ ಮಾಡ್ತಿದ್ದೀನಿ. ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ಹೋರಾಟನೂ ಮಾಡುತ್ತೇನೆ. ಆಡಳಿತ ಪಕ್ಷ, ವಿರೋಧ ಪಕ್ಷ ಜನರಿಗೆ ಏನೂ ಮಾಡದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೇನೆ, ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ. ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡುತ್ತೇನೆ. ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನೆ. ನನ್ನನ್ನು ಗೆಲ್ಲಿಸ್ತೀರಾ..’ಎಂದು ಪತ್ರದಲ್ಲಿ ಉಪೇಂದ್ರ ಕೇಳಿದ್ದಾರೆ.

‘ನೀವು ನನ್ನನ್ನು ಗೆಲ್ಲಿಸುತ್ತೀರೋ, ಸೋಲಿಸುತ್ತೀರೋ ? ಆದರೆ ನಾನು ಎಲೆಕ್ಷನ್‌ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೆ ಅಂತ ಕೇಳ್ತೀರಾ. ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿಕೊಂಡಿರೋರು ಫೇಮಸ್‌ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟಿ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನು ಕೊಡೋದು ರಾಜಕೀಯ! ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೋ ಸಾಮಾನ್ಯರು ಚುನಾವಣೆಗೆ ನಿಲ್ಲುತ್ತಾರೆ. ಬರೀ ಪ್ರಜಾಕೀಯ ವಿಚಾರ ತಿಳಿದುಕೊಂಡು ಓಟ್‌ ಹಾಕಿ ಅವರಿಗೆ ಕೆಲಸ ಕೊಟ್ಟರೆ ನಿಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸೆ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಕೆಲಸ ಮಾಡುತ್ತಾರೆ. ಪ್ರಜಾಕೀಯದ ಕಾರ್ಯವೈಖರಿ ತರ ಕೆಲಸ ಮಾಡಿಲ್ಲ, ನಿಮಗೆ ಅವರ ಕೆಲಸ ಇಷ್ಟ ಆಗಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷಕ್ಕೆ ಪಕ್ಷಾಂತರ ಆಗಲು ಹೋದರೆ ನಾನು ಉಪೇಂದ್ರ CM ಆಗಿ ನಿಮ್ಮ ಜೊತೆ ನಿಲ್ಲುತ್ತೇನೆ. ನಿಮ್ಮ ಜೊತೆ ಉಗ್ರ ಹೋರಾಟ ಮಾಡಿ , ಅಂತಹ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡುವಂತೆ ಮಾಡುತ್ತೇನೆ. ಈ ವ್ಯವಸ್ಥೆ ಸರಿಯಾಗಲು ಎರಡು ಚುನಾವಣೆ ಹೆಚ್ಚಾದರೂ ಪರವಾಗಿಲ್ಲ. ಜನಕ್ಕೆ ಅಭ್ಯರ್ಥಿ ಇಷ್ಟ ಆಗದೇ ಇದ್ದರೆ ಅವರನ್ನು ಕೆಳಗಿಳಿಸಬೇಕು ಎನ್ನುವ ಕಾನೂನು ಬರಬೇಕು. ಅದಕ್ಕೆ ನಿಮ್ಮ ಜೊತೆ ನಾನು ಯಾವಗಲೂ ಇರುವ ‘Permanent CM(ಕಾಮನ್‌ ಮ್ಯಾನ್‌) ಜನಸಾಮಾನ್ಯ. ಇಲ್ಲ ಇಲ್ಲ...ಅಸಾಮಾನ್ಯರಲ್ಲಿ ಒಬ್ಬನಾಗಿ ಇರುತ್ತೇನೆ ಸರೀನಾ?’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.