ADVERTISEMENT

ವೆನಮ್ ಇಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 19:30 IST
Last Updated 3 ಅಕ್ಟೋಬರ್ 2018, 19:30 IST
ವೆನಮ್ ಚಿತ್ರದಲ್ಲಿ ಟಾಮ್ ಹಾರ್ಡಿ
ವೆನಮ್ ಚಿತ್ರದಲ್ಲಿ ಟಾಮ್ ಹಾರ್ಡಿ   

ಮಾರ್ವೆಲ್ ಕಾಮಿಕ್ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧಗೊಂಡಿರುವಹಾಲಿವುಡ್‌ನ ‘ವೆನಮ್’ ಸಿನಿಮಾವು ಸೆಪ್ಟೆಂಬರ್ 4ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಸೋನಿ ಮಾರ್ವೆಲ್ಸ್ ಯುನಿವರ್ಸ್‌ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಈ ಚಿತ್ರದಲ್ಲಿ ಆ್ಯಂಟಿ ಹೀರೊ ‘ಎಡ್ಡಿ ಬ್ರೋಕ್’ ಆಗಿ ಟಾಮ್ ಹಾರ್ಡಿನಟಿಸಿದ್ದಾರೆ. ‘ಲೈಫ್ ಫೌಂಡೇಷನ್’ ಎಂಬ ಸಂಸ್ಥೆಯು ಅತಿಮಾನ್ಯ ಸಂಶೋಧನೆಗಳಲ್ಲಿ ತೊಡಗಿರುತ್ತದೆ. ಆ ಸಂಸ್ಥೆಯನ್ನು ಕಾರ್ಲ್‌ಟನ್ ಡ್ರೇಕ್ (ರಿಜ್ ಅಹ್ಮದ್) ಎಂಬ ಅತ್ಯಂತ ಬುದ್ಧಿವಂತ ಸಂಶೋಧಕ ಮುನ್ನೆಡೆಸುತ್ತಿರುತ್ತಾನೆ. ತನ್ನ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲುಬ್ರೋಕ್, ಆ ಸಂಸ್ಥೆಯ ಸಂಶೋಧನೆಗಳ ತನಿಖೆಗೆ ಮುಂದಾಗುತ್ತಾನೆ.

ಡ್ರೇಕ್, ‘ಎಲಿಯನ್ಸಿಂಬಿಯಾಟ್ಸ್’ ಎಂಬ ಅಸಾಮಾನ್ಯ ಶಕ್ತಿಯನ್ನು ಸಂಶೋಧಿಸುತ್ತಾನೆ. ಡ್ರೇಕ್‌ನ ಸಂಶೋಧನೆಗಳ ಹಿಂದೆ ಬೀಳುವ ಬ್ರೋಕ್‌ನೊಂದಿಗೆ ಆ ‘ಎಲಿಯನ್ ಸಿಂಬಿಯಾಟ್ಸ್’ ಬಂಧನ ಬೆಳೆಸಿಕೊಳ್ಳುತ್ತದೆ. ಅವನಿಗೆ ಅತಿಮಾನುಷ ಶಕ್ತಿಯನ್ನೂ ಅದು ನೀಡುತ್ತದೆ.

ADVERTISEMENT

ಬ್ರೋಕ್ ಹಾಗೂಸಿಂಬಿಯಾಟ್ಸ್ ನಡುವಿನ ಸಂಬಂಧ ‘ಹೈಬ್ರಿಡ್’ ಕಲ್ಪನೆಯದ್ದು. ಒಂದೇ ವ್ಯಕ್ತಿಯ ಎರಡು ಮುಖಗಳಿದ್ದಂತೆ. ಒಂದೇ ದೇಹದಲ್ಲಿ ಎರಡು ವ್ಯಕ್ತಿತ್ವವು ಒಂದಕ್ಕೊಂದು ಪೂರಕವಾಗಿ ಹೇಗೆ ಕೆಲಸ ಮಾಡಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸ್ಪೈಡರ್ ಮ್ಯಾನ್ ಸರಣಿ ಸಿನಿಮಾಗಳ ಕೆಲ ಅಂಶಗಳನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.

ಈ ಸಿನಿಮಾವು ಇಂಗ್ಲಿಷ್,ತೆ‌ಲುಗು ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಸೋನಿ ಪಿಕ್ಚರ್ಸ್‌ ಸಂಸ್ಥೆಯು ದೇಶದಲ್ಲೆಡೆ ಈ ಸಿನಿಮಾವನ್ನು ಪ್ರಸಾರ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಅಟ್ಲಾಂಟ, ನ್ಯೂಯಾರ್ಕ್ ನಗರ, ಲಾಸ್ ಎಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ.

ಮಾರ್ವೆಲ್ ಕಾಮಿಕ್ಸ್ ಪಾತ್ರಧಾರಿಯಾಗಿ ನಟಿಸಿರುವ ಟಾಮ್ ಹಾರ್ಡಿ, 2007ರಲ್ಲಿ ತೆರೆಕಂಡ ‘ಸ್ಪೈಡರ್ ಮ್ಯಾನ್ 3’ ಸಿನಿಮಾದ ನಾಯಕನ ಪ್ರತಿಸ್ಪರ್ಧಿಯ ಪಾತ್ರದಲ್ಲಿ ಮಿಂಚಿದ್ದರು. ಮಿಷೆಲ್ ವಿಲಿಯಮ್ಸ್, ಎಡ್ಡಿಯ ಗರ್ಲ್ ಫ್ರೆಂಡ್ ‘ಅನ್ನೆವೆಯಿಂಗ್’ ಪಾತ್ರದಲ್ಲಿ ನಟಿಸಿದ್ದಾರೆ.

ಬ್ಲಾಕ್ ಫ್ಯಾಂಥರ್ ಖ್ಯಾತಿಯ ಲೌಡ್‌ವಿಂಗ್ ಗೋರನ್‌ಸನ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಮ್ಯಾಥ್ಯೂ ಲಿಬಟಿಕ್ಯೂ ಚಿತ್ರೀಕರಣ ಮಾಡಿದ್ದಾರೆ. ಅಲನ್ ಬಾಮಾರ್ಟೆನ್ ‌‌‌‌ ಸಂಕಲನ ಜವಾಬ್ದಾರಿ ಹೊತ್ತಿದ್ದು, ರುಬೆನ್ ಫ್ಲೆಷರ್ ನಿರ್ದೇಶನ ಮಾಡಿದ್ದಾರೆ.

‘ವೆನಮ್’ ಚಿತ್ರದ ಮೂಲಕ ಸೋನಿಯು ಸ್ವಂತವಾಗಿ ಪ್ರಾಂಚೈಸಿಯನ್ನು ಶುರುಮಾಡಿದೆ. ಈ ಪ್ರಾಂಚೈಸಿ ಮೂಲಕವೇ ಮುಂಬರುವ ತನ್ನ ಸ್ಪೈಡರ್‌ ಮ್ಯಾನ್ ಸರಣಿಯ ಎಲ್ಲ ಸಿನಿಮಾಗಳನ್ನು ವಿಶ್ವದೆಲ್ಲೆಡೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.