ADVERTISEMENT

ಮುಂಬೈ: ನಟಿ ಶಶಿಕಲಾ ನಿಧನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 12:51 IST
Last Updated 4 ಏಪ್ರಿಲ್ 2021, 12:51 IST
ನಟಿ ಶಶಿಕಲಾ–ಚಿತ್ರ ಕೃಪೆ: ಟ್ವಿಟರ್
ನಟಿ ಶಶಿಕಲಾ–ಚಿತ್ರ ಕೃಪೆ: ಟ್ವಿಟರ್   

ಮುಂಬೈ: ಬಾಲಿವುಡ್‌ನ ಹಿರಿಯ ನಟಿ ಶಶಿಕಲಾ (88) ಭಾನುವಾರ ಮುಂಬೈನಲ್ಲಿ ನಿಧನರಾದರು.

ವಿ.ಶಾಂತಾರಾಂ ನಿರ್ದೇಶನದ 'ತೀನ್ ಬತ್ತಿ ಚಾರ್ ರಾಸ್ತಾ', ಬಿಮಲ್ ರಾಯ್ ಅವರ ‘ಸುಜಾತಾ’, ಅಶೋಕ್ ಕುಮಾರ್ –ಮೀನಾ ಕುಮಾರಿ ನಟನೆಯ ‘ಆರತಿ’, ‘ಡಾಕು’, ‘ಖೂಬಸೂರತ್’, ‘ಅನುಪಮ’, 'ಆಯಿ ಮಿಲನ್ ಕೆ ಬೇಲಾ' ಚಿತ್ರಗಳಲ್ಲಿ ನಟಿಸಿದ್ದಾರೆ.

90ರ ದಶಕದಲ್ಲಿ ‘ಬಾದ್ಷಾ’, ‘ಕಭಿ ಖುಷಿ ಕಭಿ ಘಮ್’, ‘ಮುಝ್ಸೇ ಶಾದಿ ಕರೋಗಿ’ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳು ಹಾಗೂ ಕೆಲವು ಕಿರುತೆರೆ ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ.

ADVERTISEMENT

ಅವರ ಸೇವೆ, ಸಾಧನೆ ಪರಿಗಣಿಸಿ ಪದ್ಮಶ್ರೀ (2007) ಗೌರವ ನೀಡಿ ಪುರಸ್ಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.