ADVERTISEMENT

ಬಾಲಿವುಡ್‌ನ ಹಿರಿಯ ಹಿನ್ನೆಲೆ ಗಾಯಕ ಭೂಪಿಂದರ್ ಸಿಂಗ್ ನಿಧನ

ಐಎಎನ್ಎಸ್
Published 18 ಜುಲೈ 2022, 16:54 IST
Last Updated 18 ಜುಲೈ 2022, 16:54 IST
ಭೂಪಿಂದರ್ ಸಿಂಗ್: ಐಎಎನ್‌ಎಸ್ ಚಿತ್ರ
ಭೂಪಿಂದರ್ ಸಿಂಗ್: ಐಎಎನ್‌ಎಸ್ ಚಿತ್ರ   

ಮುಂಬೈ: ಬಾಲಿವುಡ್‌ನ ಹಿರಿಯ ಹಿನ್ನೆಲೆ ಗಾಯಕ ಭೂಪಿಂದರ್ ಸಿಂಗ್ ಸೋಮವಾರ ಸಂಜೆ ನಿಧನರಾಗಿದ್ದಾರೆ. ಈ ಕುರಿತಂತೆ ಅವರ ಪತ್ನಿ ಮತ್ತು ಗಾಯಕಿ ಮಿಥಾಲಿ ಸಿಂಗ್ ಹೇಳಿದ್ದಾರೆ.

‘ಕೆಲ ಕಾಲದಿಂದ ಮೂತ್ರಕೋಶದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಭೂಪಿಂದರ್ ಬಳಲುತ್ತಿದ್ದರು’ಎಂದೂ ಅವರು ಹೇಳಿದ್ಧಾರೆ.

82 ವರ್ಷದ ಗಾಯಕನ ಅಂತ್ಯಕ್ರಿಯೆಯ ವ್ಯವಸ್ಥೆ ಸೇರಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಮೌಸಮ್, ಸತ್ತೆ ಪೆ ಸತ್ತಾ, ಅಹಿಸ್ತಾ ಅಹಿಸ್ತಾ, ದೂರಿಯನ್, ಹಕೀಕತ್ ಮುಂತಾದ ಚಿತ್ರಗಳಲ್ಲಿ ಅವರು ಸ್ಮರಣೀಯ ಹಾಡುಗಳನ್ನು ಹಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.