ADVERTISEMENT

ಆಕ್ಷನ್ ಥ್ರಿಲ್ಲರ್ ‘ಸನಕ್‘ ಟ್ರೈಲರ್ ಬಿಡುಗಡೆ: ಅ.15 ಕ್ಕೆ ಹಾಟ್‌ಸ್ಟಾರ್‌ನಲ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2021, 13:03 IST
Last Updated 5 ಅಕ್ಟೋಬರ್ 2021, 13:03 IST
ಸನಕ್
ಸನಕ್   

ಬೆಂಗಳೂರು: ಬಾಲಿವುಡ್ ನಟ ವಿದ್ಯುತ್ ಜಮ್‌ವಾಲ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಸನಕ್‘ ಬಿಡುಗಡೆಗೆ ಸಿದ್ದವಾಗಿದ್ದು, ಇಂದು ಟ್ರೈಲರ್ ಬಿಡುಗಡೆಯಾಗಿದೆ.

ಟ್ರೈಲರ್ ಬಿಡುಗಡೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಈ ಸಿನಿಮಾ ಅಕ್ಟೋಬರ್ 15 ಕ್ಕೆ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಆಸ್ಪತ್ರೆಯೊಂದಕ್ಕೆ ನುಗ್ಗಿ ಅಲ್ಲಿನ ರೋಗಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಉಗ್ರರನ್ನು ಅಲ್ಲಿಯೇ ಸಿಕ್ಕಿಹಾಕಿಕೊಂಡಿರುವ ಚಿತ್ರದ ನಾಯಕ ಹೇಗೆ ಎಲ್ಲರನ್ನೂ ಪಾರು ಮಾಡುತ್ತಾನೆ ಎಂಬ ಕಥೆಯನ್ನು ಈ ಚಿತ್ರ ಹೊಂದಿದೆ. ಟ್ರೈಲರ್‌ನಲ್ಲಿನ ಸಾಹಸ ದೃಶ್ಯಗಳ ತುಣಕುಗಳು ನೋಡುಗರನ್ನು ರೋಮಾಂಚನಗೊಳಿಸಿವೆ.

ADVERTISEMENT

ಕಾನಿಶಕ್ ವರ್ಮಾ ನಿರ್ದೇಶನದ ‘ಸನಕ್’ ಸಿನಿಮಾವನ್ನು ವಿಪುಲ್ ಅಮೃತ್‌ಲಾಲ್ ಶಾ ಹಾಗೂ ಜೀ ಸ್ಟುಡಿಯೊ ನಿರ್ಮಿಸಿದೆ. ವಿದ್ಯುತ್‌ಗೆ ನಾಯಕಿಯಾಗಿ ಬಂಗಾಳಿ ಸೂಪರ್‌ ಸ್ಟಾರ್ ರುಕ್ಮಿಣಿ ಮೈತ್ರಾ, ನೇಹಾ ದುಫಿಯಾ ಅಭಿನಯಿಸಿದ್ದಾರೆ.

ಕೊರೊನಾ ಎರಡನೇ ಅಲೆ ಲಾಕ್‌ಡೌನ್ ನಂತರ ಬಹುತೇಕ ಕಡೆ ಚಿತ್ರಮಂದಿರಗಳನ್ನು ಶೇ 100 ರಷ್ಟು ಭರ್ತಿ ಒಪ್ಪಂದದೊಂದಿಗೆ ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ, ಕೆಲ ದೊಡ್ಡ ದೊಡ್ಡ ಚಿತ್ರಗಳು ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿರುವುದು ಚಿತ್ರಮಂದಿರಗಳ ಭವಿಷ್ಯದ ಮೇಲೆ ಮಂಕು ಕವಿಯುವಂತೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.