ADVERTISEMENT

ವಿಜಯ್‌ ರಾಘವೇಂದ್ರ 51ನೇ ಹೆಜ್ಜೆ ‘ಸಾವಿತ್ರಿ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 5:24 IST
Last Updated 31 ಜನವರಿ 2022, 5:24 IST
ವಿಜಯ ರಾಘವೇಂದ್ರ, ನೈಲಾ ಪ್ರಮೋದ್‌, ಊರ್ವಶಿ ರಾಯ್‌
ವಿಜಯ ರಾಘವೇಂದ್ರ, ನೈಲಾ ಪ್ರಮೋದ್‌, ಊರ್ವಶಿ ರಾಯ್‌   

‘ಸಾವಿತ್ರಿ’ ವಿಜಯ್‌ ರಾಘವೇಂದ್ರ ಅವರ 51ನೇ ಚಿತ್ರ.ಪಿಎನ್‌ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ಹೀಳಲಿಗೆ ಅವರು ನಿರ್ಮಿಸುತ್ತಿರುವ ಚಿತ್ರವಿದು. ಇತ್ತೀಚೆಗೆ ಚಿತ್ರದ ಮೂರು ಹಾಡುಗಳು ಹಾಗೂ ಟ್ರೇಲರ್‌ ಬಿಡುಗಡೆ ನಡೆದಿದೆ.

ವಿಜಯ ರಾಘವೇಂದ್ರ ಜೊತೆ ತಾರಾ, ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ನಾಗಾರ್ಜುನ ಛಾಯಾಗ್ರಾಹಣವಿದೆ. ಹೃದಯಶಿವ ಅವರ ಸಂಗೀತವಿದೆ ಎಂದು ನಿರ್ದೇಶಕ ಎಸ್. ದಿನೇಶ್ ಮಾಹಿತಿ ನೀಡಿದರು.

ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ ನೂರರಷ್ಟು ಆಸನಭರ್ತಿಗೆ ಅನುಮತಿ ನೀಡಿದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಲ್ಲವಾದಲ್ಲಿ ಒಟಿಟಿ ಮೂಲಕ ಪ್ರದರ್ಶಿಸುತ್ತೇವೆ ಎಂದರು ನಿರ್ಮಾಪಕ ಪ್ರಶಾಂತ್ ಕುಮಾರ್.

ADVERTISEMENT

ನಟಿಯರಾದ ಊರ್ವಶಿ ರಾಯ್, ನೈಲಾ ಪ್ರಮೋದ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.