ADVERTISEMENT

ವಿಜಯ್ ದೇವರಕೊಂಡ: ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್‌ 

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 9:48 IST
Last Updated 4 ಜನವರಿ 2020, 9:48 IST
   

ಹೈದರಾಬಾದ್‌:ವಿಜಯ್ ದೇವರಕೊಂಡ ನಟನೆಯ ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿಬಿಡುಗಡೆಯಾಗಿ 22 ಗಂಟೆಗಳಲ್ಲೇ ಈ ಟೀಸರ್‌ ಅನ್ನು 60 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮೂವರು ನಾಯಕಿಯರ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರಂತೆ!

ಕ್ರಾಂತಿ ಮಾಧವ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ವಿಜಯ್‌ಗೆ ನಾಯಕಿಯರಾಗಿರಾಶಿ ಖನ್ನಾ,ಐಶ್ವರ್ಯಾ ರಾಜೇಶ್, ಇಸಬೆಲ್ಲಾ ಲೈಟ್ ನಟಿಸಿದ್ದಾರೆ.ಕೆ.ಎ.ವಲ್ಲಭ ಅವರ ನಿರ್ಮಾಣ ಮಾಡಿದ್ದು ಗೋಪಿ ಸುಂದರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ADVERTISEMENT

ಈಗಾಗಲೇ‘ವರ್ಲ್ಡ್‌ ಫೇಮಸ್‌ ಲವರ್‌‘ ಸಿನಿಮಾದ ಫಸ್ಟ್‌ಬುಕ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.