ತಮಿಳಿನ ಜನಪ್ರಿಯ ನಟ ‘ಚಿಯಾನ್’ ವಿಕ್ರಮ್ ಅಭಿನಯದ ‘ವೀರ ಧೀರ ಶೂರನ್ -2’ ಚಿತ್ರ ಮಾ.27 ರಂದು ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ವಿಕ್ರಮ್ ಬೆಂಗಳೂರಿಗೆ ಬಂದಿದ್ದರು. ಚಿತ್ರವನ್ನು ಅರುಣ್ ಕುಮಾರ್ ಬರೆದು, ನಿರ್ದೇಶಿಸಿದ್ದಾರೆ. ರಿಯಾ ಶಿಭು ನಿರ್ಮಾಣವಿದೆ.
‘ನನ್ನ ಹಿಂದಿನ ಹಲವು ಚಿತ್ರಗಳ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ನನಗೆ ಒಳ್ಳೆಯ ಗೆಳೆಯರಿದ್ದಾರೆ. ‘ಕೆಜಿಎಫ್’, ‘ಕಾಂತಾರ’ ಚಿತ್ರಗಳ ಅಭಿಮಾನಿ. ‘ವೀರ ಧೀರ...’ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಎರಡನೇ ಭಾಗ ಈಗ ತೆರೆಗೆ ಬರುತ್ತಿದೆ. ಆ ನಂತರ ಮೊದಲ ಭಾಗ ಬರಲಿದೆ. ಇದೊಂದು ಮಾಸ್ ಚಿತ್ರ. ಅಷ್ಟೇ ನೈಜವಾಗಿಯೂ ಇದೆ. ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಅದರಲ್ಲೂ ಫ್ಲಾಶ್‍ಬ್ಯಾಕ್ ದೃಶ್ಯಗಳು ಬಹಳ ಆಸಕ್ತಿದಾಯಕವಾಗಿವೆ’ ಎಂದರು ವಿಕ್ರಮ್.
ಕನ್ನಡದ ನಟ ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುಶಾರ ವಿಜಯನ್, ಎಸ್.ಜೆ. ಸೂರ್ಯ, ಸೂರಜ್ ವೆಂಜಾರಮೂಡು ಮುಂತಾದವರು ಚಿತ್ರದಲ್ಲಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ, ತೇನಿ ಈಶ್ವರ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.