ADVERTISEMENT

666 Operation Dream Theater: ‘ಆಪರೇಷನ್‌..’ಗೆ ಹಳೇ ಲೆನ್ಸು!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 0:30 IST
Last Updated 4 ನವೆಂಬರ್ 2025, 0:30 IST
ಧನಂಜಯ, ಅದ್ವೈತ್‌ 
ಧನಂಜಯ, ಅದ್ವೈತ್‌    

‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಿತ್ರಕ್ಕಾಗಿ 70 ರ ದಶಕದ ಸಿನಿಮಾಗಳಲ್ಲಿ ಬಳಸುತ್ತಿದ್ದ ವಸ್ತ್ರ ವಿನ್ಯಾಸದಿಂದ ಹಿಡಿದು ಆ ಕಾಲದ ಲೆನ್ಸ್‌ಗಳನ್ನೂ ಚಿತ್ರತಂಡ ಶೂಟಿಂಗ್‌ಗೆ ಬಳಸಿಕೊಂಡಿದೆ. 

70, 80ರ ದಶಕದಲ್ಲಿ ರಾಜ್‌ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಬಳಸಲಾಗುತ್ತಿದ್ದ ವಿಂಟೇಜ್ ಕ್ಯಾಮೆರಾವನ್ನು ಬಳಸಿ ತಂಡ ಈಗಾಗಲೇ ಎರಡು ಹಂತಗಳ ಶೂಟಿಂಗ್‌ ಅನ್ನು ಪೂರ್ಣಗೊಳಿಸಿದೆ. ತಂಡವು ಲೆನ್ಸ್ ಆಯ್ಕೆಗಾಗಿ ಚೆನ್ನೈ, ಮುಂಬೈನಲ್ಲೂ ಹುಡುಕಾಟ ನಡೆಸಿತ್ತು. 

‘ಪ್ರತಿಯೊಂದು ದೃಶ್ಯವೂ ಅಣ್ಣಾವ್ರ ಬಾಂಡ್ ಚಿತ್ರಗಳಾದ ‘ಆಪರೇಷನ್ ಡೈಮಂಡ್ ರಾಕೆಟ್’ ಮತ್ತು ‘ಜೇಡರ ಬಲೆ’ ಚಿತ್ರಗಳ ರೀತಿ ಕಾಣಬೇಕು ಎನ್ನುವುದು ಆರಂಭದಿಂದಲೇ ಚಿತ್ರತಂಡಕ್ಕೆ ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಸಂಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್‌ನ ಮೇಲೆ ಅವಲಂಬಿಸದೆ, ಶೂಟಿಂಗ್‌ನಲ್ಲಿಯೇ ಚಿತ್ರೀಕರಿಸಲು ಹಳೆಯ ಶೈಲಿಯ ಟಂಗ್‌ಸ್ಟನ್ ಲೈಟ್ಸ್ ಮತ್ತು ವಿಂಟೇಜ್ ಲೆನ್ಸ್‌ಗಳನ್ನು ಬಳಸಿದ್ದೇವೆ. 16 ವಿಭಿನ್ನ ಲೆನ್ಸ್ ಸೆಟ್‌ಗಳನ್ನು ಪರೀಕ್ಷಿಸಿ ಗ್ರೇಡ್ ಮಾಡಿದ ನಂತರ, ನಾವು ವಿಂಟೇಜ್ ಲೊಮೋ ಅನಾಮಾರ್ಫಿಕ್ ಮತ್ತು ಲೊಮೋ ಸ್ಫೆರಿಕಲ್ ಲೆನ್ಸ್‌ಗಳನ್ನು ಆಯ್ಕೆ ಮಾಡಿದ್ದೆವು. ಇದರ ಮೂಲಕವೇ ನಾವು ‘666 ಆಪರೇಷನ್ ಡ್ರೀಮ್ ಥಿಯೇಟರ್‌’ನ ಜಗತ್ತನ್ನು ತೋರಿಸಿದ್ದೇವೆ’ ಎನ್ನುತ್ತಾರೆ ಛಾಯಾಚಿತ್ರಗ್ರಾಹಕರಾದ ಅದ್ವೈತ ಗುರುಮೂರ್ತಿ. 

ADVERTISEMENT

ಧನಂಜಯ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ವೈಶಾಖ್ ಜೆ.ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ನಿರ್ಮಿಸಿದ್ದು, ಶಿವರಾಜ್‌ಕುಮಾರ್ ಅವರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.