ADVERTISEMENT

ಯಶ್ ಜತೆ ಮಗಳು ಐರಾ ತುಂಟಾಟ: ವಿಡಿಯೊಗೆ ಅಭಿಮಾನಿಗಳಿಂದ ಮೆಚ್ಚುಗೆ ಮಹಾಪೂರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 6:38 IST
Last Updated 27 ಸೆಪ್ಟೆಂಬರ್ 2022, 6:38 IST
ಯಶ್ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್
ಯಶ್ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದ ಸ್ಕ್ರೀನ್‌ಗ್ರ್ಯಾಬ್   

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಸದಾ ಅಭಿಮಾನಿಗಳ ಸಂಪರ್ಕದಲ್ಲಿರುವ ಚಿತ್ರ ನಟ ಯಶ್, ಆಗಾಗ ತಮ್ಮ ಕುಟುಂಬದ ಚಿತ್ರಗಳು, ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಮಗಳು ಐರಾ ಜತೆಗಿನ ತುಂಟಾಟದ ವಿಡಿಯೊವೊಂದನ್ನು ಸೋಮವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಶ್, ‘ಆ್ಯನ್ ಏಂಜಲ್ ಇನ್ ಡಿಸ್‌ಗೈಸ್, ಹೌದು, ಅದು ಅವಳೇ!! ಐರಾ’ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಒತ್ತಿದ್ದಾರೆ.

ನಟಿ ರಾಧಿಕಾ ಪಂಡಿತ್ ಕೂಡ ಮಗಳು ಐರಾಳ ಜತೆಗಿನ ಸುಂದರ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಅವಳಲ್ಲಿ ಅವಳ ಅಪ್ಪನ ನೋಟ ಇದೆ. ಆಕೆಯ ವರ್ತನೆಯೂ ಹಾಗೆಯೇ ಇರಬಹುದು. ಆದರೆ, ನಾನು ಆಕೆಯಲ್ಲಿ ನನ್ನನ್ನೇ ಕಾಣುತ್ತೇನೆ. ನನ್ನ ಐರಾಗೆ ನನ್ನ ಆಶೀರ್ವಾದಗಳು’ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.