ADVERTISEMENT

ಸ್ಕೂಬಾ ಡೈವಿಂಗ್ ವೇಳೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ ಪರಿಣಿತಿ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2022, 12:20 IST
Last Updated 19 ಜೂನ್ 2022, 12:20 IST
ಪರಿಣಿತಿ ಚೋಪ್ರಾ – ಪಿಟಿಐ ಸಂಗ್ರಹ ಚಿತ್ರ
ಪರಿಣಿತಿ ಚೋಪ್ರಾ – ಪಿಟಿಐ ಸಂಗ್ರಹ ಚಿತ್ರ   

ನಟಿ ಪರಿಣಿತಿ ಚೋಪ್ರಾ ಸ್ಕೂಬಾ ಡೈವಿಂಗ್ ವೇಳೆ ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ಕೂಬಾ ಡೈವಿಂಗ್ ತರಬೇತುದಾರರೂ ಆಗಿರುವ ಚೋ‍ಪ್ರಾ, ‘ಸ್ಕೂಬಾ ಡೈವಿಂಗ್ ಅನ್ನು ಆಸ್ವಾದಿಸಿದೆ. ಅದೇ ರೀತಿ ಸಾಗರವನ್ನು ರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದಕ್ಕೂ ಖುಷಿ ಇದೆ’ ಎಂದು ಹೇಳಿದ್ದಾರೆ.

ಸ್ಕೂಬಾ ಡೈವಿಂಗ್ ವೇಳೆ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಚೋಪ್ರಾ, ಸಾಗರ ಮಾಲಿನ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಹಾಗೂ ಜಾಗೃತಿ ಸಂದೇಶವನ್ನೂ ಪ್ರಕಟಿಸಿದ್ದಾರೆ.

ಪ್ರತಿ ವರ್ಷ 1.40 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ. 2020ರ ದಶಕದ ಅಂತ್ಯದ ವೇಳೆಗೆ ಸಾಗರದಲ್ಲಿನ ಪ್ಲಾಸ್ಟಿಕ್ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಸಾವಿರಾರು ಸಾಗರ ಜೀವಿಗಳ ವಿನಾಶಕ್ಕೆ ಕಾರಣವಾಗಬಹುದು. ವಿನಾಶದ ಅಂಚಿನಲ್ಲಿರುವ ಜಲಚರಗಳಲ್ಲಿ ಕೆಲವು ಕಡಲಾಮೆಗಳು, ಡಾಲ್ಫಿನ್‌ಗಳು ಹಾಗೂ ಸೀಲ್‌ಗಳು ಸೇರಿವೆ. ಅದೃಷ್ಟವಶಾತ್, ಸಾಗರವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಕೈಜೋಡಿಸುವ ಮೂಲಕ ಸ್ಕೂಬಾ ಡೈವರ್‌ಗಳು ಈ ಜೀವಿಗಳನ್ನು ರಕ್ಷಿಸುವ ಕೆಲಸದಲ್ಲಿ ಕೈಜೋಡಿಸಬಹುದು ಎಂದು ಅವರು ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.