ADVERTISEMENT

ತಯಾರಾಗುತ್ತಿದೆ ವಿಜಯ್‌ ಮಲ್ಯ ಜೀವನಾಧಾರಿತ ವೆಬ್‌ಸೀರೀಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2021, 11:04 IST
Last Updated 17 ಡಿಸೆಂಬರ್ 2021, 11:04 IST
ತಮ್ಮ ಆಪ್ತೆ ಪಿಂಕಿ ಲಾಲ್‌ವಾನಿ ಅವರೊಂದಿಗೆ ಲಂಡನ್‌ ನ್ಯಾಯಾಲಯದಿಂದ ಹೊರಬರುತ್ತಿರುವ ವಿಜಯ್‌ ಮಲ್ಯ (ರಾಯಿಟರ್ಸ್‌ ಚಿತ್ರ)
ತಮ್ಮ ಆಪ್ತೆ ಪಿಂಕಿ ಲಾಲ್‌ವಾನಿ ಅವರೊಂದಿಗೆ ಲಂಡನ್‌ ನ್ಯಾಯಾಲಯದಿಂದ ಹೊರಬರುತ್ತಿರುವ ವಿಜಯ್‌ ಮಲ್ಯ (ರಾಯಿಟರ್ಸ್‌ ಚಿತ್ರ)   

ಬೆಂಗಳೂರು: ಉದ್ಯಮಿ ವಿಜಯ್‌ ಮಲ್ಯ ಅವರ ಜೀವನ ಯಾನದ ಕುರಿತ ಖ್ಯಾತ ಪತ್ರಕರ್ತ ಕೆ ಗಿರಿ ಪ್ರಕಾಶ್ ಕೃತಿ ಆಧರಿಸಿ ವೆಬ್ ಸರಣಿ ತಯಾರಾಗುತ್ತಿದೆ. ಅದರ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

ಚಿತ್ರಕ್ಕಾಗಿ ‘ದಿ ವಿಜಯ್ ಮಲ್ಯ ಸ್ಟೋರಿ’ ಕೃತಿಯ ಹಕ್ಕುಗಳನ್ನು ಆಲ್ಮೈಟಿ ಮೋಷನ್ ಪಿಕ್ಚರ್ ಸಹಯೋಗದೊಂದಿಗೆ ಪಡೆದುಕೊಂಡಿರುವುದಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಎಂಎಕ್ಸ್‌ ಪ್ಲೇಯರ್ ಘೋಷಿಸಿದೆ. ಈ ಬಗ್ಗೆ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಪುಸ್ತಕವನ್ನು ‘ಪೆಂಗ್ವಿನ್ ರಾಂಡಮ್ ಹೌಸ್’ ಪ್ರಕಟಿಸಿದೆ.
'ಆಶ್ರಮ', 'ಕ್ವೀನ್', 'ಮತ್ಸ್ಯ ಕಾಂಡ್' ಮತ್ತು 'ಹೈ' ನಂತಹ ವೆಬ್ ಸರಣಿಗಳನ್ನು ‘ಎಂಎಕ್ಸ್‌ ಒರಿಜಿನಲ್‌ ಸೀರೀಸ್‌’ ನಿರ್ಮಾಣ ಮಾಡಿದೆ. .

ADVERTISEMENT

‘ವೆಬ್ ಸರಣಿಯು ಮಲ್ಯ ಅವರ ಶ್ರಮ, ಯಶಸ್ಸನ್ನು ಒಳಗೊಂಡಿರಲಿದೆ,’ ಎಂದು ಮೂಲಗಳು ತಿಳಿಸಿವೆ.
ಕಿಂಗ್‌ಫಿಶರ್ ಏರ್‌ಲೈನ್ಸ್, ಯುನೈಟೆಡ್ ಸ್ಪಿರಿಟ್ಸ್ ಮತ್ತು ಯುನೈಟೆಡ್ ಬ್ರೂವರೀಸ್‌ನಂತಹ ಮದ್ಯ ಕಂಪನಿಗಳ ಮಾಲೀಕರಾಗಿರದ್ದ ವಿಜಯ್‌ ಮಲ್ಯ, ಫಾರ್ಮುಲಾ ಒನ್ ರೇಸಿಂಗ್ ತಂಡವನ್ನೂ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.