ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳ ಯಶಸ್ಸಿನ ಬಳಿಕ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಇಮೇಜ್ ಸೃಷ್ಟಿಸಿಕೊಂಡಿದ್ದರು. ಆ ನಂತರ ಪ್ರಭಾಸ್ ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲಷ್ಟೇ ಗಮನ ಹರಿಸಿದ್ದರು.
ಈಗ ಬಾಲಿವುಡ್ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಪ್ರಭಾಸ್ ‘ಆದಿಪುರುಷ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾವು ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತವಾಗಿದ್ದು ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ಆದರೆ ಪ್ರಭಾಸ್‌ಗೆ ಈ ಸಿನಿಮಾ ಕಂಟಕವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಕೆಲ ಮೂಲಗಳು.ಕಾರಣವೆಂದರೆ, ರಾಮ ಹಾಗೂ ರಾವಣರ ಕಥೆಯನ್ನು ಹೊಂದಿರುವ ಇನ್ನೊಂದು ಸಿನಿಮಾ ಕೂಡ ಬರಲಿದೆ. ಆ ಚಿತ್ರಕ್ಕೆ ‘ರಾಮ ಸೇತು’ ಎಂದು ಹೆಸರಿಸಲಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಈ ಚಿತ್ರವನ್ನು ಘೋಷಿಸಿದ್ದರು. ‘ಇದು ರಾಮ ಹಾಗೂ ರಾವಣರ ನಡುವೆ ನಡೆಯುವ ಯದ್ಧದ ಕತೆಯನ್ನು ಹೊಂದಿದ ಚಿತ್ರ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಈ ಸಿನಿಮಾದ ಶೂಟಿಂಗ್ ಅಯೋಧ್ಯೆಯಲ್ಲೇ ನಡೆಯಲಿದ್ದು ಅಕ್ಷಯ್ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ರಾಮಸೇತು ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾದರೆ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾಕ್ಕೆ ಹಿನ್ನಡೆಯಾಗುವುದು ಪಕ್ಕಾ ಎನ್ನುತ್ತಿವೆ ಮೂಲಗಳು. ಆದಿಪುರುಷ್ ಸಿನಿಮಾದ ಶೂಟಿಂಗ್ 2021ರ ಜನವರಿಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.