ADVERTISEMENT

‘ಯುವ’ ರಾಜ್‌ಕುಮಾರ್‌ ಚೊಚ್ಚಲ ಚಿತ್ರದ ಹೆಸರು, ಟೈಟಲ್‌ ಟೀಸರ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2023, 14:42 IST
Last Updated 3 ಮಾರ್ಚ್ 2023, 14:42 IST
‘ಯುವ’ ಚಿತ್ರದ ಪೋಸ್ಟರ್‌
‘ಯುವ’ ಚಿತ್ರದ ಪೋಸ್ಟರ್‌    

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್‌ ಮನೆತನದ ಯುವ ರಾಜ್ಕುಮಾರ್ ನಟನೆಯ ಹೊಸ ಚಿತ್ರದ ಟೈಟಲ್ ಹಾಗೂ ಟೈಟಲ್ ಟೀಸರ್ ಅನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಮಗ ಯುವ ರಾಜ್ಕುಮಾರ್ ಅವರ ಮೊದಲ ಸಿನಿಮಾ ಇದಾಗಿದ್ದು, ‘ಯುವ’ (Yuva) ಎಂಬ ಹೆಸರು ಇಡಲಾಗಿದೆ. ಚಿತ್ರದ ಟೈಟಲ್‌ನ ಟೀಸರ್‌ ಅನ್ನೂ ‘ಹೊಂಬಾಳೆ ಫಿಲ್ಮ್ಸ್‌’ ಬಿಡುಗಡೆ ಮಾಡಿದೆ.

‘ಯುವ’ ಸಿನಿಮಾವವನ್ನು ಆನಂದ ರಾಮ್‌ ಅವರು ನಿರ್ದೇಶಿಸುತ್ತಿದ್ದು, ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್‌’ ಬಂಡವಾಳ ಹೂಡಿದೆ.

ADVERTISEMENT

ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.