ADVERTISEMENT

ಪುನೀತ್ ರಾಜ್‌ಕುಮಾರ್ ಅಭಿನಯದ ’ಯುವರತ್ನ‘ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 12:42 IST
Last Updated 8 ಅಕ್ಟೋಬರ್ 2019, 12:42 IST
   

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೊಸ ಸಿನಿಮಾ ಯುವರತ್ನ ಟೀಸರ್ ಬಿಡುಗಡೆಯಾಗಿದೆ.

ಅಪ್ಪು ಸಿನಿಮಾದ ನಂತರ ಕಾಲೇಜು ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ಪುನೀತ್, ರಗ್ಬಿಆಟಗಾರನಾಗಿಯೂ ಇಲ್ಲಿ ಕಾಣಿಸಿಕೊಂಡಿದ್ದಾರೆ.

'ಈ ದುನಿಯಾದಲ್ಲಿ ಮೂರು ಥರ ಗಂಡಸರಿರುತ್ತಾರೆ. ರೂಲ್‌ನ ಫಾಲೋ ಮಾಡೋರು, ರೂಲ್‌ನ ಬ್ರೇಕ್ ಮಾಡೋರು, ಮೂರನೇಯವರು ನನ್ನ ಥರ ರೂಲ್ ಮಾಡೋರು' ಎಂಬ ಖಡಕ್ ಸಂಭಾಷಣೆ ಇಡೀ ಟೀಸರ್‌ ಅನ್ನು ಆವರಿಸಿಕೊಂಡಿದೆ.

ADVERTISEMENT

ಹೊಂಬಾಳೆ ಕ್ರಿಯೇಷನ್ ಬ್ಯಾನರ್ ಅಡಿ ವಿಜಯ್ ಕಿರಂಗದೂರು ಬಂಡವಾಳ ಹೂಡಿದ್ದಾರೆ.ಸಂತೋಷ್ ಆನಂದ ರಾಮ್ಚಿತ್ರ ನಿರ್ದೇಶಿಸಿದ್ದಾರೆ.

ಸೋನುಗೌಡ, ‘ಡಾಲಿ’ಧನಂಜಯ್, ಸಯೇಶಾ, ಪ್ರಕಾಶ್‌ ರಾಜ್, ವಸಿಷ್ಠ ಸಿಂಹ, ಸುಧಾರಾಣಿ, ಸಾಯಿಕುಮಾರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ತಾರಾಗಣದಲ್ಲಿದ್ದಾರೆ.

ಈಗಾಗಲೇ ಈ ಟೀಸರ್‌ ಅನ್ನು12 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.