
ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಇದೀಗ ಜೀ5 ಒಟಿಟಿಯಲ್ಲೂ ಪ್ರಸಾರ ಕಾಣಲಿದೆ. ಸಿಂಪಲ್ ಸುನಿ ನಿರ್ದೇಶನದ ಸರಳ ಮತ್ತು ವಿರಳವಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಕಳೆದ ವರ್ಷ ತೆರೆ ಕಂಡಿತ್ತು. ಬಳಿಕ ಅಮೆಜಾನ್ ಒಟಿಟಿಯಲ್ಲಿಯೂ ಲಭ್ಯವಿತ್ತು. ಇದೇ ತಿಂಗಳ 21ರಿಂದ ಜೀ5 ಒಟಿಟಿಯಲ್ಲೂ ಲಭ್ಯವಿದೆ ಎಂದು ಚಿತ್ರತಂಡ ಹೇಳಿದೆ.
ವಿನಯ್‌ಗೆ ಸ್ವತಿಷ್ಠ ಕೃಷ್ಣನ್, ಮಲ್ಲಿಕಾ ಅಮೋಘ ನಾಯಕಿಯಾಗಿದ್ದರು. ಸಂಗೀತ ನಿರ್ದೇಶಕನೊಬ್ಬನ ಕಥೆಯನ್ನು ಹೊಂದಿರುವ ಚಿತ್ರ ನವಿರಾದ ಹಾಡುಗಳಿಂದಲೇ ಪ್ರೇಕ್ಷಕರನ್ನು ಸೆಳೆದಿತ್ತು. ವಿನಯ್ ಹಾಗೂ ಸ್ವತಿಷ್ಠ ಕೃಷ್ಣನ್ ನಟನೆಯೊಂದಿಗೆ ವೀರ್ ಸಮರ್ಥ್ ಸಂಗೀತ ಚಿತ್ರವನ್ನು ಗೆಲುವಿನ ದಡ ತಲುಪಿಸಿತ್ತು.
ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಮುಂತಾದವರು ಸಿನಿಮಾದಲ್ಲಿದ್ದಾರೆ. ಆದಿ ಅವರ ಸಂಕಲನವಿದ್ದು, ಕಾರ್ತಿಕ್ ಛಾಯಾಚಿತ್ರಗ್ರಹಣವಿದೆ. ರಾಮ್ ಮೂವೀಸ್ ಬ್ಯಾನರ್‌ನಡಿ ಮೈಸೂರು ರಮೇಶ್ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.