ನಂದಮೂರಿ ಬಾಲಕೃಷ್ಣ
ಚಿತ್ರ: ಎಕ್ಸ್ ಖಾತೆ
ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರ ಅಖಂಡ–2 ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಒಟಿಟಿ ಪ್ರಸಾರದ ದಿನಾಂಕ ಕೂಡ ಘೋಷಣೆಯಾಗಿದೆ.
ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಪ್ರಚಾರ ಪಡೆದುಕೊಂಡಿದ್ದ ಅಖಂಡ 2 ಸಿನಿಮಾ, ಡಿಸೆಂಬರ್ 12ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿತ್ತು. ಜಾಗತಿಕವಾಗಿ ಈ ಸಿನಿಮಾ ₹122.6 ಕೋಟಿ ಗಳಿಕೆ ಕಂಡಿತ್ತು.
ಎಲ್ಲಿ, ಯಾವಾಗ ವೀಕ್ಷಿಸಬಹುದು?
ಅಖಂಡ 2 ಸಿನಿಮಾ ‘ನೆಟ್‌ಫ್ಲಿಕ್ಸ್’ ಒಟಿಟಿ ವೇದಿಕೆಯಲ್ಲಿ ಜನವರಿ 9ರ ಶುಕ್ರವಾರದಿಂದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆ ತಪ್ಪಿಸಿಕೊಂಡವರು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.
ಅಖಂಡ 2 ಕಥೆ ಏನು?
ಚೀನಾದ ಸೇನೆ ಭಾರತದ ಸಮಗ್ರತೆಗೆ ಧಕ್ಕೆ ತರಲು ಸಂಚು ರೂಪಿಸಿ, ಮಹಾ ಕುಂಭಮೇಳದ ವೇಳೆ ಗಂಗಾ ನದಿಯಲ್ಲಿ ವೈರಸ್ ಸೇರಿಸಿ ದಾಳಿ ಮಾಡುತ್ತಾರೆ. ಇದಕ್ಕೆ ಭಾರತದ ರಾಜಕೀಯ ನಾಯಕ (ಕಬೀರ್ ಸಿಂಗ್) ಸಹಕಾರ ನೀಡುತ್ತಾನೆ.
ಈ ವೈರಸ್ ದಾಳಿಗೆ ತುತ್ತಾದ ಜನರಿಗೆ ಬಾಲಮುರಳಿ ಕೃಷ್ಣ (ಬಾಲಕೃಷ್ಣ) ಅವರ ಪುತ್ರಿ ಜನನಿ (ಹರ್ಷಾಲಿ) ಲಸಿಕೆ ಕಂಡು ಹಿಡಿಯುತ್ತಾರೆ. ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಲಸಿಕೆ ತಯಾರಿಸುವುದನ್ನು ತಡೆಯುವುದಕ್ಕೆ ಪ್ರಯತ್ನ ಮಾಡುತ್ತೆ. ಆಗ ಅಖಂಡ (ಬಾಲಕೃಷ್ಣ) ಎಂಟ್ರಿ ಕೊಡುತ್ತಾನೆ. ಇಲ್ಲಿಂದ ಸಿನಿಮಾದಲ್ಲಿ ಅಖಂಡನ ಅಸ್ತಿತ್ವ ಹಾಗೂ ಸನಾತನ ಧರ್ಮಕ್ಕಾಗಿ ನಡೆಸುವ ಹೋರಾಟವನ್ನು ಬಿತ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.