ADVERTISEMENT

ಮಾಲ್ಡೀವ್ಸ್ ಬೀಚ್ ವಿಹಾರ; ಕೆಂಪು ಈಜುಡುಗೆಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2022, 5:47 IST
Last Updated 26 ಮಾರ್ಚ್ 2022, 5:47 IST
   

ಸೆಲೆಬ್ರಿಟಿಗಳು ಡಯಟ್‌, ವರ್ಕೌಟ್‌, ಪ್ರಯಾಣ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

ಇದೀಗಬಾಲಿವುಡ್‌ನಮಾದಕ ಚೆಲುವೆ ಸನ್ನಿ ಲಿಯೋನ್ ಅವರು ಬೀಚ್‌ನಲ್ಲಿ ಅಲೆಯುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಬೇಸಿಗೆಯನ್ನು ಆನಂದಿಸಲು ತಮ್ಮ ಪತಿ ಡೇನಿಯಲ್ ವೆಬರ್‌ ಅವರೊಂದಿಗೆ ಮಾಲ್ಡೀವ್ಸ್‌ ಬೀಚ್‌ಗೆ ತೆರಳಿರುವ ಅವರು, ಈ ವೇಳೆ ಡ್ರೋನ್‌ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿರುವ 12 ಸೆಕೆಂಡುಗಳ ವಿಡಿಯೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿಶುಕ್ರವಾರ ಹಂಚಿಕೊಂಡಿದ್ದಾರೆ.

ADVERTISEMENT

ಕೆಂಪು ಬಿಕಿನಿ ತೊಟ್ಟು ಕಡಲ ತಟದಲ್ಲಿ ಓಡುತ್ತಿರುವ ಸನ್ನಿಯ ವಿಡಿಯೊ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿದೆ. 'ಖಾಸಗಿ ದ್ವೀಪ ನಮಗಾಗಿ' ಎಂದು ಬರೆದುಕೊಂಡಿರುವ ಈ ವಿಡಿಯೊವನ್ನು ಇದುವರೆಗೆ 33 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ನೋಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.