ADVERTISEMENT

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2023, 2:55 IST
Last Updated 2 ಮಾರ್ಚ್ 2023, 2:55 IST
ಗೌರಿ ಖಾನ್
ಗೌರಿ ಖಾನ್   

ಲಖನೌ: ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವರು ದೂರು ನೀಡಿದ್ದು, ಗೌರಿ ಖಾನ್‌ ವಿರುದ್ಧ ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗೌರಿ ಖಾನ್‌ ಅವರು ತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಇವರ ಪ್ರಭಾವದಿಂದಾಗಿಯೇ ನಾನು ಇದೇ ಕಂಪನಿ ನಿರ್ಮಾಣ ಮಾಡಿದ್ದ ಪ್ಲಾಟ್‌ ಖರೀದಿಸಿದ್ದೆ. ಇದಕ್ಕೆ ₹ 86 ಲಕ್ಷ ಹಣವನ್ನು ಪಾವತಿ ಮಾಡಿದ್ದೇನೆ. ಆದರೆ ಕಂಪನಿಯವರು ನನಗೆ ನೀಡಬೇಕಾದ ಪ್ಲಾಟ್‌ ಅನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಗೌರಿ ಖಾನ್‌ ಮಾತ್ರವಲ್ಲದೇ ಕಂಪನಿ ಎಂಡಿ ಅನಿಲ್ ಕುಮಾರ್ ತುಳಸಿಯಾನಿ, ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧವೂ ಜಸ್ವಂತ್ ಶಾ ದೂರು ದಾಖಲಿಸಿದ್ದಾರೆ.

ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ಅವರ ಪ್ರಭಾವದಿಂದಾಗಿಯೇ ನಾನು ಲಖನೌದಲ್ಲಿರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಫ್ಲಾಟ್ ಮಾಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.