ನವದೆಹಲಿ: ಜಿಯೊ ಹಾಟ್‌ಸ್ಟಾರ್ ‘ಒಟಿಟಿ’ಯು ರಿಲಯನ್ಸ್ ಹಾಗೂ ಭಾರತದಲ್ಲಿ ವಾಲ್ಟ್ ಡಿಸ್ನಿ ಜೊತೆಗಿನ ವಿಲೀನದ ನಂತರ 30 ಕೋಟಿ ಚಂದಾದಾರರನ್ನು ಹೊಂದುವ ಮೂಲಕ ಜಗತ್ತಿನ 2ನೇ ದೊಡ್ಡ ಒಟಿಟಿ ವೇದಿಕೆಯಾಗಿದೆ ಎಂದು ಆಕಾಶ್ ಅಂಬಾನಿ ತಿಳಿಸಿದ್ದಾರೆ.
‘ಇದೀಗ ಜಿಯೊ ಸ್ಟಾರ್‌ನಲ್ಲಿ 3.2 ಲಕ್ಷ ಗಂಟೆಗಳ ಕಂಟೆಂಟ್ ಲಭ್ಯವಿದೆ. ಪ್ರತಿ ವರ್ಷವೂ 30 ಸಾವಿರ ಗಂಟೆಗಳ ಕಂಟೆಂಟ್ ಸೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಶೇ 34ರಷ್ಟು ಟಿ.ವಿ ಮಾರುಕಟ್ಟೆಯ ಶೇರು ಮೌಲ್ಯ ಹೊಂದಿರುವ ಜಿಯೊ ಸ್ಟಾರ್, ಹತ್ತು ಕೋಟಿಗೂ ಅಧಿಕ ಟಿ.ವಿ ಹಾಗೂ ಮೊಬೈಲ್ ಸ್ಕ್ರೀನ್‌ಗಳನ್ನು ತಲುಪುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಜಿಯೊ ಸ್ಟಾರ್ ಅನ್ನು ಮತ್ತಷ್ಟು ಒಟಿಟಿ ಜೊತೆಗೆ ವಿಲೀನ ಮಾಡುವ ಹಾಗೂ ಭೌಗೋಳಿಕವಾಗಿ ವಿಸ್ತರಿಸುವ ಗುರಿ ಹೊಂದಿದೆ. ಒಳ್ಳೆಯ ಕಂಟೆಂಟ್ ಹಾಗೂ ಎಐ ಅನುಭವ ನೀಡಲು ನಾವು ಸಿದ್ದರಿದ್ದೇವೆ. ತಂತ್ರಜ್ಞಾನದ ಮೂಲಕ ಕತೆಗಳನ್ನು ಮರು ನಿರ್ಮಿಸುತ್ತೇವೆ ಎಂದಿದ್ದಾರೆ.
ಜಿಯೊ ಹಾಟ್‌ಸ್ಟಾರ್ ‘ಒಟಿಟಿ’ಯು ಕಳೆದ ಮೂರು ತಿಂಗಳಲ್ಲಿ 60 ಕೋಟಿ ಬಳಕೆದಾರರನ್ನು ಪಡೆದಿದೆ. ಇದರಲ್ಲಿ 7.5 ಕೋಟಿ ಬಳಕೆದಾರರು ಟಿ.ವಿ.ಗೆ ಒಟಿಟಿ ಸಂಪರ್ಕ ಪಡೆದಿದ್ದಾರೆ ಎಂದು ತಿಳಿಸಿದರು.
ಪ್ರಸಿದ್ಧ ಒಟಿಟಿ ವೇದಿಕೆಯಾದ ‘ನೆಟ್‌ಫ್ಲಿಕ್ಸ್‘ ಜಗತ್ತಿನಲ್ಲೇ ಅತಿ ಹೆಚ್ಚು ಚಂದಾದಾರರನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.