ADVERTISEMENT

OTT: ಪೊಲೀಸ್‌ ಇಲಾಖೆಯಲ್ಲಿನ ನೈಜ ಘಟನೆಯಾಧಾರಿತ ಸಿನಿಮಾ ‘ಸಿರೈ’ ಒಟಿಟಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 9:36 IST
Last Updated 16 ಜನವರಿ 2026, 9:36 IST
   

ಪೊಲೀಸ್‌ ಇಲಾಖೆಯಲ್ಲಿನ ಜಾತಿ ತಾರತಮ್ಯ, ಕೆಳ ಹಂತದ ಅಧಿಕಾರಿಗಳ ಸಂಕಷ್ಟ, ಕೈದಿಗಳ ಮನಸ್ಥಿತಿ, ವ್ಯವಸ್ಥೆ, ನ್ಯಾಯಾಂಗ ಪಕ್ಷಪಾತ, ಜಾತಿ ಪದ್ದತಿ.. ಹೀಗೆ ಹಲವು ಹಂತಗಳಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ತೆರೆದಿಡುವ ತಮಿಳಿನ ಆ್ಯಕ್ಷನ್–ಥ್ರಿಲ್ಲರ್ ಸಿನಿಮಾ, ‘ಸಿರೈ’ ಜ.23ರಂದು ಜೀ.5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

‘ಸಿರೈ’ ಚಿತ್ರವು 2025ರ ಡಿ.25ರಂದು ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿತ್ತು. ಕೇವಲ ₹3 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಇದುವರೆಗೆ ₹30 ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ತಮಿಜ್ ಅವರು ಚಿತ್ರಕತೆ ಬರೆದಿದ್ದಾರೆ. ತಮ್ಮ ಪೊಲೀಸ್‌ ವೃತ್ತಿ ಜೀವನದಲ್ಲಿ ಗಮನಿಸಿದ ಸಂಗತಿಗಳನ್ನು ‘ಸಿರೈ’ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದಾರೆ.

ADVERTISEMENT

ಸುರೇಶ್ ರಾಜಕುಮಾರಿ ಅವರು ‘ಸಿರೈ’ ಚಿತ್ರವನ್ನು ನಿರ್ದೇಶಿಸಿದ್ದಾರೆ.‌ ವಿಕ್ರಮ್‌ ಪ್ರಭು, ಎಲ್‌.ಕೆ. ಅಕ್ಷಯ್ ಕುಮಾರ್, ಆನಂದ ತಂಬಿರಾಜ, ಮುನ್ನಾರ್ ರಮೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು 124 ನಿಮಿಷ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.