ADVERTISEMENT

ಈ ವಾರ ಒಟಿಟಿಯಲ್ಲಿ ತೆರೆಕಾಣುತ್ತಿವೆ ಕುತೂಹಲ ಮೂಡಿಸುವ ಸಿನಿಮಾಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2025, 15:27 IST
Last Updated 16 ಸೆಪ್ಟೆಂಬರ್ 2025, 15:27 IST
   

ಈ ವಾರ ಕುತೂಹಲಭರಿತ ಕಥೆಯಿಂದ ಹಿಡಿದು ಮನಮುಟ್ಟುವ ಪ್ರೇಮಕಥೆ ಹೊತ್ತ ಸಿನಿಮಾಗಳು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ತೆರೆಕಾಣುತ್ತಿವೆ.

ಟ್ರಯಲ್

ಬಾಲಿವುಡ್‌ ನಟಿ ಕಾಜೋಲ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಟ್ರಯಲ್‌’ ವೆಬ್‌ ಸರಣಿ ಒಟಿಟಿಯಲ್ಲಿ ತೆರೆಕಾಣುತ್ತಿದೆ. ನ್ಯಾಯಾಲಯದ ದೃಶ್ಯಗಳನ್ನು ಒಳಗೊಂಡಿರುವ ಈ ಸರಣಿ ಕೊನೆಯವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳಲಿದೆ ಎನ್ನಲಾಗಿದೆ

ADVERTISEMENT

ಎಲ್ಲಿ ನೋಡಬಹುದು: ಜಿಯೊ ಹಾಟ್‌ಸ್ಟಾರ್‌

ಭಾಷೆ: ಹಿಂದಿ

ಎಂದಿನಿಂದ: ಸೆ.19

ಹೌಸ್‌ಮೇಟ್ಸ್‌

ಮದುವೆಯಾದ ಹೊಸ ಜೋಡಿ ತಮ್ಮ ಹೊಸ ಜೀವನದ ಹೊಸ್ತಿಲಲ್ಲಿ ನಿಗೂಢ ಸತ್ಯವೊಂದು ಬಯಲಾಗುತ್ತದೆ. ಅದರ ಬಳಿಕ ಕಥೆ ಏನಾಗಲಿದೆ ಎನ್ನುವುದೇ ‘ಹೌಸ್‌ ಮೇಟ್ಸ್’ ಚಿತ್ರದ ಕಥಾಹಂದರ

ಎಲ್ಲಿ ನೋಡಬಹುದು: ಜೀ5

ಭಾಷೆ: ತಮಿಳು

ಎಂದಿನಿಂದ: ಸೆ.19

ಮಾತೊಂದ ಹೇಳುವೆ

ಹುಬ್ಬಳ್ಳಿ– ಧಾರವಾಡದ ಹುಡುಗ ಮತ್ತು ಮೈಸೂರಿನ ಹುಡುಗಿಯ ನಡುವಿನ ಪ್ರೇಮಕಥೆಯನ್ನು ‘ಮಾತೊಂದ ಹೇಳುವೆ’ ಚಿತ್ರ ತೆರೆದಿಡಲಿದೆ.

ಎಲ್ಲಿ ನೋಡಬಹುದು: ಸನ್‌ನೆಕ್ಸ್ಟ್‌

ಭಾಷೆ: ಕನ್ನಡ

ಎಂದಿನಿಂದ: ಸೆ.19

ಇಂದ್ರ

ಕ್ರೈಮ್‌ ಥ್ರಿಲ್ಲರ್‌ ‘ಇಂದ್ರ’ ಸಿನಿಮಾ ಅಮಾನತುಗೊಂಡ ಪೊಲೀಸ್‌ ಅಧಿಕಾರಿಯ ಸುತ್ತ ಸುತ್ತುತ್ತದೆ. ದೃಷ್ಟಿ ಕಳೆದುಕೊಂಡಿದ್ದರೂ, ಕ್ರೂರ ಸರಣಿ ಕೊಲೆಗಾರನನ್ನು ಪತ್ತೆಹಚ್ಚಲು ಹೊರಟ ಆತ ಅಪಾಯಕ್ಕೆ ಸಿಲುಕಿದಾಗ ಹೇಗೆ ಪಾರಾಗುತ್ತಾನೆ ಎನ್ನುವುದನ್ನು ಈ ಚಿತ್ರ ತೆರೆದಿಡುತ್ತದೆ.

ಎಲ್ಲಿ ನೋಡಬಹುದು: ಸನ್‌ನೆಕ್ಸ್ಟ್‌

ಭಾಷೆ: ತಮಿಳು

ಎಂದಿನಿಂದ: ಸೆ.19

The BA***DS of Bollywood

ಬಾಲಿವುಡ್‌ನ ಹೊಳಪು ಮತ್ತು ಅವ್ಯವಸ್ಥೆಯ ವಿರುದ್ಧ ಹೆಣೆಯಲಾದ ಈ ಸರಣಿಯು, ಹೊಸ ನಟ ಮತ್ತು ಆತನ ಸ್ನೇಹಿತರು ದೊಡ್ಡ ಕನಸನ್ನು ಹೊತ್ತು ಸಾಗುವಾಗ ಎದುರಾಗುವ ಸವಾಲುಗಳ ಬಗ್ಗೆ ತೋರಿಸಲಾಗಿದೆ.

ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್

ಭಾಷೆ: ಹಿಂದಿ

ಎಂದಿನಿಂದ: ಸೆ.18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.