ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹಾಡುಗಳು ನಿಧಾನಕ್ಕೆ ಜನರನ್ನು ತಲುಪುತ್ತಿದ್ದು, '295' ಶೀರ್ಷಿಕೆಯ ಹಾಡು 'ಬಿಲ್ಲಿಬೋರ್ಡ್ ಗ್ಲೋಬಲ್ 200'ರ ಪಟ್ಟಿ ಸೇರಿದೆ. ಯೂಟ್ಯೂಬ್ನಲ್ಲಿ ಟಾಪ್ 3ನೇ ಸ್ಥಾನಕ್ಕೆ ಏರಿದೆ.
ಮೂಸೆವಾಲಾ ಅವರ '295' ಹಾಡು ಶುಕ್ರವಾರ ಟಾಪ್ 200 ಹಾಡುಗಳ ಪೈಕಿ 154ನೇ ಸ್ಥಾನದಲ್ಲಿದೆ.
ಮೂಸೆವಾಲಾ ಅವರ ನಿಜವಾದ ಹೆಸರು ಶುಭ್ದೀಪ್ ಸಿಂಗ್. ಇವರ 'ಸೋ ಹೈ', 'ಸೇಮ್ ಬೀಫ್', 'ದಿ ಲಾಸ್ಟ್ ರೈಡ್' ಮತ್ತು 'ಜಸ್ಟ್ ಲಿಸನ್' ಮುಂತಾದ ಹಾಡುಗಳು ಪ್ರಸಿದ್ಧಿಗೆ ಬರುತ್ತಿವೆ.
ಪಂಜಾಬ್ನ ಮಾನ್ಸ ಜಿಲ್ಲೆಯಲ್ಲಿ ಮೇ 29ರಂದು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದರು. ಮೂಸೆವಾಲಾ ಅವರ ದೇಹದೊಳಗೆ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.