ADVERTISEMENT

‘ದಿ ಆರ್ಚೀಸ್‘ ಶೂಟಿಂಗ್ ಸೆಟ್‌ನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2022, 12:56 IST
Last Updated 3 ಜೂನ್ 2022, 12:56 IST
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್    

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ನೆಟ್‌ಫ್ಲಿಕ್ಸ್‌ನ ‘ದಿ ಆರ್ಚೀಸ್‌‘ ವೆಬ್‌ ಸಿರೀಸ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ವೆಬ್‌ ಸಿರೀಸ್‌ ಶೂಟಿಂಗ್ ವಿವಿಧ ತಾಣಗಳಲ್ಲಿ ನಡೆಯುತ್ತಿದ್ದು, ಸುಹಾನಾ ಖಾನ್ ಅವರು ಊಟಿಯಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ಸುಹಾನಾ ಜತೆ ಖುಷಿ ಕಪೂರ್ ಕೂಡ ಜೋಯಾ ಅಖ್ತರ್ ನಿರ್ದೇಶನದ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ.

ADVERTISEMENT

ಇಬ್ಬರೂ ಯುವತಾರೆಯರು ಚಿತ್ರತಂಡದೊಂದಿಗೆ ಶೂಟಿಂಗ್ ಅನ್ನು ಆನಂದಿಸುತ್ತಿದ್ದೇವೆ ಎಂದು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಕಪ್ಪು ಬಣ್ಣದ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿರುವ ಸುಹಾನಾ ಫೋಟೊ, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.