ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಅಧ್ಯಾಯ–1 ಸಿನಿಮಾ ಇಂದು (ಗುರುವಾರ) ಅದ್ಧೂರಿಯಾಗಿ ತೆರೆ ಕಂಡಿದೆ. ವಿಶ್ವದಾದ್ಯಂತ ಸಿನಿ ಪ್ರೇಕ್ಷಕರು ಸಿನಿಮಾಗೆ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಟ ಶಿವರಾಜ್ ಕುಮಾರ್, ಜ್ಯೂ. ಎನ್‌ಟಿಆರ್, ಅಶ್ವಿನಿ ಪುನಿತ್ ರಾಜಕುಮಾರ್ ಸೇರಿದಂತೆ ಗಣ್ಯರು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಕುಮಾರ್ ಹೇಳಿದ್ದೇನು?
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ನಟ ಶಿವರಾಜ್ ಕುಮಾರ್. 'ಕಾಂತಾರ ನಮ್ಮ ನೆಲದ ಕಥೆ. ನಮ್ಮ ನಾಡಿನ ಕಥೆ. ಇಂದು ಕಾಂತಾರವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ವಿಜಯ್ ಕಿರಗುಂದೂರು, ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು' ಎಂದು ಶುಭ ಕೋರಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು?
'ಕಾಂತಾರ ಅಧ್ಯಾಯ-1' ಚಿತ್ರಕ್ಕೆ ಶುಭ ಹಾರೈಕೆಗಳು. ಇದು ಜಾನಪದ, ನಂಬಿಕೆ ಮತ್ತು ಮಾನವನ ಭಾವನೆಗಳ ಆಕರ್ಷಕ ನಿರೂಪಣೆಯಾಗಿ ಹೆಣೆಯುವ ಒಂದು ಅದ್ಭುತ ಸಿನಿಮೀಯ ಅನುಭವವಾಗಿದೆ. ರಿಷಬ್ ಶೆಟ್ಟಿ ಅದ್ಭುತವಾಗಿದೆ ನಟಿಸಿದ್ದಾರೆ. ಬೆರಗುಗೊಳಿಸುವ ಛಾಯಾಗ್ರಹಣ ಮತ್ತು ಮನಸ್ಸಿಗೆ ಮುದ ನೀಡುವ ಸಂಗೀತದ ಅನುಭವವು ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಈ ದೈವಿಕ ಸಾಹಸಗಾಥೆಯ ಹಿಂದೆ ಕೆಲಸ ಮಾಡಿರುವ ಇಡೀ ತಂಡಕ್ಕೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಜ್ಯೂ ಎನ್‌ಟಿಆರ್ ಅಭಿನಂದನೆ
'ಅದ್ಭುತ ಯಶಸ್ಸನ್ನು ಗಳಿಸಿದ ಕಾಂತಾರ–1 ಚಿತ್ರ ತಂಡಕ್ಕೆ ಅಭಿನಂದನೆಗಳು. ರಿಷಬ್ ಶೆಟ್ಟಿ ಸರ್ ಒಬ್ಬ ಅದ್ಭುತ ನಟನಾಗಿ ಮಾತ್ರವಲ್ಲ ಅದ್ಭುತ ನಿರ್ದೇಶಕನಾಗಿ ಊಹಿಸಲಾಗದ್ದನ್ನು ಸಾಧಿಸಿದ್ದಾರೆ. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ರಿಷಬ್ ಸರ್ ಅವರ ಯೋಚನೆಗಳನ್ನು ಬೆಂಬಲಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಅವರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.