ADVERTISEMENT

ಹೂ ಮುಡಿದು ಸೀರೆಯುಟ್ಟು ಚೆನ್ನೈಗೆ ಬಂದ ಚೆಲುವೆ ಸನ್ನಿ ಲಿಯೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2022, 10:59 IST
Last Updated 3 ನವೆಂಬರ್ 2022, 10:59 IST
 ಸನ್ನಿ ಲಿಯೋನ್– ಚಿತ್ರ ಕೃಪೆ ಓ ಮೈ ಘೋಸ್ಟ್ ಚಿತ್ರ ತಂಡ
ಸನ್ನಿ ಲಿಯೋನ್– ಚಿತ್ರ ಕೃಪೆ ಓ ಮೈ ಘೋಸ್ಟ್ ಚಿತ್ರ ತಂಡ   

ಚೆನ್ನೈ: ಭಾರತೀಯಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಅವರು ಇದೀಗ ತಮಿಳಿನ ‘ಓ ಮೈ ಘೋಸ್ಟ್’ ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಹಾರರ್ ಕಾಮಿಡಿ ಕಥೆಹೊಂದಿರುವ ಈ ಸಿನಿಮಾದ ಆಡಿಯೊ ಬಿಡುಗಡೆಗೆ ಬುಧವಾರ ಸನ್ನಿ ಚೆನ್ನೈಗೆ ಆಗಮಿಸಿದ್ದರು. ಅವರ ಆಗಮನ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಸನ್ನಿ ತುಸು ವಿಭಿನ್ನವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಹಸಿರು ಸೀರೆಯುಟ್ಟು ಅದಕ್ಕೆ ಒಪ್ಪುವ ಕೆಂಪು ರವಿಕೆ ಧರಿಸಿ ಹೂ ಮುಡಿದು ಅಪ್ಪಟ ಸಂಪ್ರದಾಯಸ್ಥ ನಾರಿಯಾಗಿ ಕಂಗೊಳಿಸಿದ್ದಾರೆ.

ಅವರ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸನ್ನಿ ಅವರನ್ನು ಸೀರೆಯಲ್ಲಿ ನೋಡಿ ಅವರ ಅಭಿಮಾನಿಗಳು ಸಂತಸಪಟ್ಟಿದ್ದಾರೆ.

ADVERTISEMENT

ಇನ್ನು ಆರ್ ಯುವನ್ ನಿರ್ದೇಶನದಲ್ಲಿ ಮೂಡಿಬಂದಿರುವ ಓ ಮೈ ಘೋಸ್ಟ್ ಸಿನಿಮಾ ಮುಂದಿನ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಡಿ.ವೀರಸಕ್ತಿ ಹಾಗೂ ಕೆ.ಸಾಯಿಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸತೀಶ್, ಯೋಗಿ ಬಾಬು ಸೇರಿದಂತೆ ಅನೇಕರ ತಾರಾಗಣವಿದೆ.

ಪ್ರವಾಸ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಸನ್ನಿ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.