ADVERTISEMENT

ಹರಿಕಥೆ ಕಲಿಕೆಗೆ ಷಡ್ಜ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಕಥಾಕೀರ್ತನವನ್ನು (ಹರಿಕಥೆ) ಪುನರುತ್ಥಾನಗೊಳಿಸುವ ಉದ್ದೇಶದೊಂದಿಗೆ ಇತ್ತೀಚೆಗೆ `ಷಡ್ಜಕಲಾ ಕೇಂದ್ರ~ ಕಾರ್ಯಾರಂಭ ಮಾಡಿದೆ. ಇಲ್ಲಿ ಹರಿಕಥೆಯನ್ನು ಕ್ರಮಬದ್ಧವಾಗಿ ಕಲಿಸಿಕೊಡಲಾಗುತ್ತದೆ.

ಜೊತೆಗೆ ಪ್ರವಚನ, ದಾಸಸಾಹಿತ್ಯ, ಸಂತಸಾಹಿತ್ಯಗಳ ಅಧ್ಯಯನಕ್ಕೂ ಅವಕಾಶವಿದೆ. ತರಗತಿಗಳನ್ನು ಕೀರ್ತನ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ನಡೆಸಿಕೊಡಲಿದ್ದಾರೆ. ದತ್ತಾತ್ರೇಯ ವೇಲಣಕರ್ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಶ್ರೀನಾಥ ಬಿದರೆ ಅವರು ಚಿತ್ರಕಲೆ ಕಲಿಸುತ್ತಾರೆ.

ಉದ್ಘಾಟನೆಯಲ್ಲಿ ಡಾ. ಭದ್ರಗಿರಿ ಅಚ್ಯುತದಾಸ, ವಿನಾಯಕ ತೊರವಿ, ಭದ್ರಗಿರಿ ಸರ್ವೋತ್ತಮದಾಸ ಮತ್ತಿತರರು  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀನಾಥ್ ಅವರ ಚಿತ್ರಕಲೆಗಳ ಪ್ರದರ್ಶನ ಆಯೋಜಿಸಲಾಗಿತ್ತು.     ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.