ADVERTISEMENT

ರಾಮಾಶ್ರಮ: ಮಕ್ಕಳಿಂದ ಯಕ್ಷಗಾನ ಆಖ್ಯಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:46 IST
Last Updated 19 ಏಪ್ರಿಲ್ 2019, 19:46 IST
ಗಿರಿನಗರದ ರಾಮಾಶ್ರಮದಲ್ಲಿ ಈಚೆಗೆ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯು ಬಾಲ ಕಲಾವಿದರಿಂದ ಯಕ್ಷಗಾನ ‘ಮಾಯಾಪುರಿ ಮಹಾತ್ಮೆ’ ಮತ್ತು ‘ವೀರಮಣಿ ಕಾಳಗ’ ಯಕ್ಷಗಾನ ಆಖ್ಯಾನ ಆಯೋಜಿಸಿತ್ತು
ಗಿರಿನಗರದ ರಾಮಾಶ್ರಮದಲ್ಲಿ ಈಚೆಗೆ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯು ಬಾಲ ಕಲಾವಿದರಿಂದ ಯಕ್ಷಗಾನ ‘ಮಾಯಾಪುರಿ ಮಹಾತ್ಮೆ’ ಮತ್ತು ‘ವೀರಮಣಿ ಕಾಳಗ’ ಯಕ್ಷಗಾನ ಆಖ್ಯಾನ ಆಯೋಜಿಸಿತ್ತು   

ಗಿರಿನಗರದ ರಾಮಾಶ್ರಮದಲ್ಲಿ ಕರ್ನಾಟಕ ಕಲಾದರ್ಶಿನಿ ಸಂಸ್ಥೆಯು ಈಚೆಗೆ ಬಾಲಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಹಾಗೂ ‘ವೀರಮಣಿ ಕಾಳಗ’ ಯಕ್ಷಗಾನ ಆಖ್ಯಾನ ಆಯೋಜಿಸಿತ್ತು.

ಗಿರಿನಗರ ರಾಮಚಂದ್ರಾಪುರ ಮಠದ ಅಧ್ಯಕ್ಷ ರಮೇಶ್ ಹಾಗೂ ಕಲ್ಯಾಣಿ ಮೋಟಾರ್ಸ್‌ನ ರಾಜ್ಯ ಮುಖ್ಯ ಮಹಾಪ್ರಬಂಧಕ ಎಸ್.ಎನ್. ಶೆಟ್ಟಿ ಬಾಲ ಕಲಾವಿದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ಕರ್ನಾಟಕ ಕಲಾದರ್ಶಿನಿ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಯಕ್ಷಶಿಕ್ಷಣದ ಪರಿಚಯ ಮಾಡಿದರು. ಸದಾನಂದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಸಾಸ್ತಾನ ವಂದಿಸಿದರು.

ADVERTISEMENT

ಶತ್ರುಘ್ನನಾಗಿ ಶ್ರೀಹರಿ ಸರಳಾಯ ಹಾಗೂ ವೀರಮಣಿಯಾಗಿ ಸುಧನ್ವಭಟ್ ಮುಖ್ಯಪಾತ್ರದಲ್ಲಿ ಮಿಂಚಿದರು. ಧೀರ ರಾಣಿಯರಾದ ಮದನಾಕ್ಷಿ, ತಾರಾವಳಿ ಪಾತ್ರದಲ್ಲಿ ಧ್ರುತಿ ಅಮ್ಮೆಂಬಳ ಹಾಗೂ ರಮ್ಯಶ್ರೀ ಪಾತ್ರ ನಿರ್ವಹಿಸಿದರು. ಹಾಸ್ಯದಲ್ಲಿ ರಘು ರಂಜಿಸಿದರು. ರಾಮಾಶ್ವಮೇಧ ಸೇನೆಯಲ್ಲಿ ಚಂದ್ರಕೇತುವಾಗಿ ಕೃಷ್ಣಭಟ್, ದಮನನಾಗಿ ಸಿದ್ದಾರ್ಥ, ಪುಷ್ಕಳನಾಗಿ ಶ್ರೀವತ್ಸ ಸರಳಾಯ ರಂಜಿಸಿದರು. ಈಶ್ವರನಾಗಿ ಶ್ರೀನಿಧಿ ಶರ್ಮ, ನಾರದನಾಗಿ ಆಯುಶ್ ಎಸ್., ಸೇನಾ ನಾಯಕನಾಗಿ ಸುಶಾಂತ್ ಶರ್ಮ, ಶುಭಾಂಗ, ರುಕ್ಮಾಂಗರಾಗಿ ಶ್ರೇಯಸ್ ಸರಳಾಯ ಹಾಗೂ ಆದಿತ್ಯ ಸರಳಾಯ ಗಮನ ಸೆಳೆದರು. ಕೃಷ್ಣಭಟ್, ಅದಿತಿ, ಸೃಷ್ಟಿ ರಂಗ ಚಾಲನೆ ನೀಡಿದರು. ಭಾಗವತರಾಗಿ ವಿಶ್ವನಾಥ ಶೆಟ್ಟಿ, ಮೃದಂಗದಲ್ಲಿ ರಾಘವೇಂದ್ರ ಬದುವಾಳ, ಚಂಡೆಯಲ್ಲಿ ಅಜಿತ್‌ಕುಮಾರ್ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.